Gold karat: 24, 22, 18 ಚಿನ್ನದ ಕ್ಯಾರೆಟ್‌ಗಳ ವ್ಯತ್ಯಾಸವೇನು? ಚಿನ್ನ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

Gold karat : ಬಂಗಾರ ಖರೀದಿಸುವಾಗ ಸರಿಯಾದ ಮಾಹಿತಿ ಇಲ್ಲದೆ ಹೋದರೆ ಲಾಭದ ಬದಲು ನಷ್ಟವಾಗುವ ಸಾಧ್ಯತೆ ಇದೆ. ಕೇವಲ 4 ದಿನಗಳಲ್ಲಿ ಚಿನ್ನದ ಬೆಲೆ 28 ಸಾವಿರ ರೂ. ಏರಿಕೆಯಾಗಿದೆ. ಅವಸರದಲ್ಲಿ ಅಂಗಡಿಗೆ…

Gold karat

Gold karat : ಬಂಗಾರ ಖರೀದಿಸುವಾಗ ಸರಿಯಾದ ಮಾಹಿತಿ ಇಲ್ಲದೆ ಹೋದರೆ ಲಾಭದ ಬದಲು ನಷ್ಟವಾಗುವ ಸಾಧ್ಯತೆ ಇದೆ. ಕೇವಲ 4 ದಿನಗಳಲ್ಲಿ ಚಿನ್ನದ ಬೆಲೆ 28 ಸಾವಿರ ರೂ. ಏರಿಕೆಯಾಗಿದೆ. ಅವಸರದಲ್ಲಿ ಅಂಗಡಿಗೆ ಹೋಗುವ ಮುನ್ನ ಈ ತಪ್ಪುಗಳ ಬಗ್ಗೆ ಎಚ್ಚರ ವಹಿಸಿ

ಹೌದು, ಸಾಮಾನ್ಯವಾಗಿ 24 ಕ್ಯಾರೆಟ್ ಚಿನ್ನವನ್ನು 99.9% ಶುದ್ಧ ಚಿನ್ನವೆಂದು ಪರಿಗಣಿಸಲಾಗುತ್ತದೆ, ಆದರೆ ಇದು ಆಭರಣ ತಯಾರಿಕೆಗೆ ಸೂಕ್ತವಲ್ಲ. ಹೂಡಿಕೆ ಉದ್ದೇಶಕ್ಕೆ ನಾಣ್ಯ, ಬಾರ್‌ಗಳಲ್ಲಿ ಬಳಸಲಾಗುತ್ತದೆ.

ಭಾರತದಲ್ಲಿ 22 ಕ್ಯಾರೆಟ್ (916 ಚಿನ್ನ) ಹೆಚ್ಚು ಬಳಕೆಯಲ್ಲಿದ್ದು, 91.6% ಶುದ್ಧ ಚಿನ್ನದೊಂದಿಗೆ ತಾಮ್ರ ಅಥವಾ ಬೆಳ್ಳಿ ಮಿಶ್ರಣವಿರುತ್ತದೆ. ಇದು ಆಭರಣಗಳಿಗೆ ಸೂಕ್ತ. 18 ಕ್ಯಾರೆಟ್ ಚಿನ್ನದಲ್ಲಿ 75% ಶುದ್ಧ ಚಿನ್ನವಿದ್ದು, ಇದು ಬಲಿಷ್ಠವಾಗಿದ್ದು, ಡೈಮಂಡ್ ಮತ್ತು ಸ್ಟೋನ್ ಆಭರಣಗಳಿಗೆ ಸೂಕ್ತ.

Vijayaprabha Mobile App free

ಚಿನ್ನ ಖರೀದಿಸುವಾಗ ಈ 4 ತಪ್ಪುಗಳನ್ನು ಮಾಡಬೇಡಿ

1. ಹೂಡಿಕೆಯ ಉದ್ದೇಶ ತಿಳಿಯದಿರುವುದು (ಸ್ವಲ್ಪ ಕಾಲಕ್ಕೆ ಅಥವಾ ದೀರ್ಘಕಾಲಕ್ಕೆ).

2. ಬೆಲೆಗಳ ಕಡೆ ಗಮನ ಕೊಡದೆ ಇರುವುದು, ಅತಿಯಾದ ಬೆಲೆ ಇದ್ದಾಗ ಖರೀದಿಸುವುದು.

3. ತುರ್ತು ನಿಧಿ ಇಲ್ಲದೆ ಹೂಡಿಕೆ ಮಾಡುವುದು.

. ಶುದ್ಧತೆ (ಹಾಲ್‌ಮಾರ್ಕ್) ಪರಿಶೀಲಿಸದೆ ಖರೀದಿಸುವುದು. ಯಾವಾಗಲೂ ವಿಶ್ವಾಸಾರ್ಹ ಅಂಗಡಿಗಳಲ್ಲಿ ಹಾಲ್‌ಮಾರ್ಕ್ ನೋಡಿ ಖರೀದಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply