Raksha Bandhan ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಪೂರ್ಣಿಮೆ ತಿಥಿಯ೦ದು ಆಚರಿಸಲಾಗುತ್ತದೆ. ಸಹೋದರ- ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ & ರಕ್ಷಣೆಯ ಸಂಕೇತವಾದ ಈ ಹಬ್ಬದಂದು, ಸಹೋದರರ ದೀರ್ಘಾಯುಷ್ಯ, ಪ್ರಗತಿ & ಉತ್ತಮ ಆರೋಗ್ಯವನ್ನು ಬಯಸಿ ರಾಖಿ ಕಟ್ಟುತ್ತಾರೆ. ಈ ದಿನದ೦ದು ರಾಖಿ ಕಟ್ಟಲು ಶುಭಸಮಯ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ.
ಶುಭ ಸಮಯ
ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ಪೂರ್ಣಿಮೆಯಂದು ಆಚರಿಸಲಾಗುತ್ತದೆ. 2025ರ ರಕ್ಷಾಬಂಧನ ಆಗಸ್ಟ್ 9 ರಂದು ಆಚರಿಸಲಾಗುತ್ತಿದ್ದು, ಈ ದಿನ ರಾಖಿ ಕಟ್ಟುವ ಶುಭ ಸಮಯ ಆಗಸ್ಟ್ 9 ರಂದು ಬೆಳಿಗ್ಗೆ 5.47 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1. 24 ರವರೆಗೆ ಮು೦ದುವರಿಯುತ್ತದೆ. ಈ ವರ್ಷ ಸರ್ವಾರ್ಥ ಸಿದ್ದಿ ಯೋಗ & ಸೌಭಾಗ್ಯ ಯೋಗಗಳಿವೆ. ಭದ್ರನ ನೆರಳು ಇಲ್ಲದಿರುವುದರಿಂದ ದಿನವಿಡೀ ರಾಖಿ ಕಟ್ಟಲು ಅವಕಾಶವಿದೆ.
ರಾಖಿ ಹಬ್ಬದ ಪೂಜಾ ವಿಧಾನ
- ಈ ದಿನ ಸಹೋದರ, ಸಹೋದರಿಯರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಸೂರ್ಯ ದೇವರಿಗೆ ನೀರು ಅರ್ಪಿಸಿ.
- ಶುದ್ಧವಾದ ತಟ್ಟೆ ತೆಗೆದುಕೊಂಡು ಅದರ ಮೇಲೆ ಶುದ್ಧವಾದ ಬಟ್ಟೆ ಹರಡಿ. ತಟ್ಟೆಯಲ್ಲಿ ಕಲಶ, ತೆಂಗಿನಕಾಯಿ, ವೀಳ್ಯದೆಲೆ, ಕುಂಕುಮ, ಶ್ರೀಗಂಧ, ಅಕ್ಷತೆ, ಮೊಸರು, ರಾಖಿ ಮತ್ತು ಸಿಹಿತಿಂಡಿ ಇರಿಸಿ.
- ತುಪ್ಪದ ದೀಪ ಬೆಳಗಿಸಿ. ದೇವರಿಗೆ ರಾಖಿ ಕಟ್ಟಿ ಮೇಲೆ ಹೇಳಿದ ಶುಭಮುಹೂರ್ತ ನೋಡಿದ ನಂತರ ನಿಮ್ಮ ಸಹೋದರನನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಲು ಹೇಳಿ.
- ಇದರ ನಂತರ, ಸಹೋದರನಿಗೆ ತಿಲಕವನ್ನು ಅನ್ವಯಿಸಿ, ನಂತರ ರಾಖಿ ಅಂದರೆ ರಕ್ಷಾ ಸೂತ್ರವನ್ನು ಕಟ್ಟಿ ಆರತಿ ಮಾಡಿ, ಸಿಹಿ ತಿಂಡಿಯನ್ನು ತಿನ್ನಿಸಿ.
- ರಾಖಿಯನ್ನು ಕಟ್ಟುವಾಗ, ಸಹೋದರ & ಸಹೋದರಿ ತಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಉಡುಗೊರೆಯನ್ನು ನೀಡಬೇಕು.
ರಾಖಿ ಕಟ್ಟುವಾಗ ಪಠಿಸಬೇಕಾದ ಮಂತ್ರ
ಯೇನ ಬದ್ದೋ ಬಲಿಃ ರಾಜ ದಾನವೇ೦ದ್ರೋ ಮಹಾಬಲಃ ತೇನ ತ್ವಾಮಪಿ ಬದ್ಮಾಮಿ ರಕ್ಷೇ ಮಾ ಚಮ ಮಾ ಚಲ
ಜನೇನ ವಿಧಿನಾ ಯಸ್ತು ರಕ್ಷಾಬಂಧನಮಾಚರೇತ। ಸ ಸರ್ವದೋಷ ರಹಿತ ಸುಖಿ ಸಂವತ್ಸರೇ ಭವೇತ್||
ವೈದಿಕ ರಾಖಿ
ವೈದಿಕ ರಾಖಿಯನ್ನು ಕಟ್ಟುವುದು ತುಂಬಾನೇ ಮುಖ್ಯವಾದುದ್ದಾಗಿದ್ದು, ಶಾಸ್ತ್ರಗಳ ಪ್ರಕಾರ, ವೈದಿಕ ರಾಖಿಯನ್ನು ತಯಾರಿಸಲು 5 ವಸ್ತುಗಳು ಅವಶ್ಯಕವಾಗಿರುತ್ತದೆ. ಅವುಗಳೆಂದರೆ, ದುರ್ವಾ ಹುಲ್ಲು, ಅಕ್ಷತೆ, ಕೇಸರಿ, ಚಂದನ & ಸಾಸಿವೆ ಕಾಳುಗಳು ಬೇಕಾಗುತ್ತದೆ. ಈ 5 ವಸ್ತುಗಳನ್ನು ಒಂದು ರೇಷ್ಮೆ ಬಟ್ಟೆಯನ್ನು ಕಟ್ಟಿ ಅಥವಾ ಅದನ್ನು ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಹೊಲಿದು, ನಂತರ ಅದನ್ನು ಕಲವಾ ದಾರದಲ್ಲಿ ಸೂತ್ರ ಮಾಡಿಕೊಳ್ಳಿ. ಈ ರೀತಿಯಾದ ರಾಖಿಯನ್ನು ವೈದಿಕ ರಾಖಿಯೆಂದು ಗುರುತಿಸಲಾಗುತ್ತದೆ.




