ಬಿಳಿ ಶಿಲೀಂಧ್ರ (ವೈಟ್ ಫಂಗಸ್) ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಬಾಧಿಸುವ ಸೋಂಕು.
ಏಡ್ಸ್, ಮಧುಮೇಹ, ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಸೇರಿದಂತೆ ಇನ್ನು ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಬಿಳಿ ಶಿಲೀಂಧ್ರ (ವೈಟ್ ಫಂಗಸ್)ಸೋಂಕು ಕಾಣಿಸಿಕೊಳ್ಳುತ್ತದೆ.
ಇದು ಚರ್ಮ, ಉದರ, ಮೂತ್ರಪಿಂಡ, ಮಿದುಳು, ಜನನಾಂಗಗಳು, ಬಾಯಿ ಹಾಗೂ ಶ್ವಾಸಕೋಶಗಳಲ್ಲಿ ಕಾಣಿಸಿಕೊಳ್ಳಬಹುದು. ಮಹಿಳೆಯರು ಹಾಗೂ ಮಕ್ಕಳಲ್ಲಿ ಇದರ ಅಪಾಯ ಹೆಚ್ಚು ಎಂದು ವೈದ್ಯರು ತಿಳಿಸಿದ್ದಾರೆ.
‘ವೈಟ್ ಫಂಗಸ್’ ಲಕ್ಷಣಗಳು:
*ಸಾಮಾನ್ಯವಾಗಿ ಕೋವಿಡ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇ ಬಿಳಿ ಶಿಲೀಂಧ್ರ (ವೈಟ್ ಫಂಗಸ್) ಸೋಂಕಿತರಲ್ಲಿಯೂ ಕಾಣಿಸಿಕೊಳ್ಳುತ್ತದೆ.
*ಚರ್ಮದ ಮೇಲೆ ನೋವಿಲ್ಲದ, ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಸೋಂಕಿಗೆ ತುತ್ತಾದ 1-2 ವಾರದ ಬಳಿಕ ಗುಳ್ಳೆಗಳು ಏಳುತ್ತವೆ.
*ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದರೆ ಕಫ, ಉಸಿರಾಟದ ಸಮಸ್ಯೆ ಹಾಗು ಎದೆ ನೋವು ಕಾಣಿಸಿಕೊಳ್ಳಬಹುದು.
*ಸಂದುಗಳಲ್ಲಿ ಸೋಂಕು ಕಾಣಿಸಿ, ಅತೀವ ನೋವಿರುತ್ತದೆ.
* ತಲೆನೋವು, ಮುಖದಲ್ಲಿ ನೋವು, ಮೂಗು ಕಟ್ಟುವಿಕೆ, ದೃಷ್ಟಿ ಮಂಜಾಗುವುದು, ಕಾಣದಂತೆ ಆಗುವುದು ರೋಗದ ಲಕ್ಷಣಗಳು.
* ಅಷ್ಟೇ ಅಲ್ಲದೆ ಕಣ್ಣಿನಲ್ಲಿ ನೋವು, ಕಣ್ಣು ಕಪ್ಪು ಬಣ್ಣಕ್ಕೆ ತಿರುಗುವುದು, ಕೆನ್ನೆಗಳು ಊದಿಕೊಳ್ಳುವುದು, ರಕ್ತ ವಾಂತಿ
ಹಾಗು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುವುದು ಈ ರೋಗದ ಪ್ರಮುಖ ಲಕ್ಷಣಗಳು.