ರಾಜ್ಯವನ್ನೇ ಭಯಪಡಿಸುತ್ತಿರುವ ಕೊರೋನಾ ಸೋಂಕು ಬಂದ 1 ಅಥವಾ 2 ವಾರದ ಒಳಗೆ ಕೆಲವರಿಗೆ ಭಯಾನಕ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಈ ಕಾಯಿಲೆ ಬಂದರೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಇದನ್ನು ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಕೊರೋನಾ ಬಂದ ವ್ಯಕ್ತಿಗಳಿಗೆ 1 ಅಥವಾ 2 ವಾರದ ಒಳಗೆ ತೀವ್ರ ತಲೆನೋವು, ಮುಖದಲ್ಲಿ ನೋವು, ಹಲ್ಲು ನೋವು, ಮುಖದಲ್ಲಿ ಕಪ್ಪು ಬಣ್ಣಗಳು ಆದರೆ, ತೀವ್ರ ತಲೆನೋವು ಕೂಡ ಬ್ಲಾಕ್ ಫಂಗಸ್‍ನ ಮೊದಲನೆಯ ಲಕ್ಷಣಗಳು ಆಗಿರುತ್ತವೆ.
ಕಪ್ಪು ಶಿಲೀಂದ್ರದ (ಬ್ಲಾಕ್ ಫಂಗಸ್) ಲಕ್ಷಣ, ಕಾರಣ:
ಲಕ್ಷಣ: * ಮೂಗು ಮತ್ತು ಕಣ್ಣಿನ ಸುತ್ತ ನೋವು, ಕೆಂಪು ಉರಿಯೂತ ಕಾಣಿಸುತ್ತದೆ.
* ಇದರ ಜೊತೆಗೆ ಜ್ವರ, ತಲೆನೋವು, ಕೆಮ್ಮು, ಉಸಿರು ಕಟ್ಟುವುದು, ರಕ್ತ ಮಿಶ್ರಿತ ವಾಂತಿ, ಮಾನಸಿಕ ಸ್ಥಿತಿ ಬದಲಾವಣೆಯಾಗುವುದು ಈ ರೋಗದ ಪ್ರಮುಖ ಲಕ್ಷಣವಾಗಿವೆ.
ಕಾರಣಗಳು: * ಹತೋಟಿ ತಪ್ಪಿದ ಸಕ್ಕರೆ ಖಾಯಿಲೆ, * ಸ್ಟಿರಾಯ್ಡ್ ಔಷಧಿಗಳ ಬಳಕೆ, * ತೀವ್ರ ನಿಗಾ ಘಟಕದಲ್ಲಿ ದೀರ್ಘಾವಧಿ ಆರೈಕೆಯಲ್ಲಿರುವವರು, * ಸಾಂಗತ್ಯ ರೋಗಗಳು, ಅಂಗಾಂಗ ಕಸಿ ನಂತರ ಕ್ಯಾನ್ಸರ್, * ಚರ್ಮದ ಸೋಂಕು,
ಬ್ಲ್ಯಾಕ್ ಫಂಗಸ್ ನಿಂದ ತಪ್ಪಿಸಿಕೊಳ್ಳಲು ಕೆಲ ಸಲಹೆ:
ಬ್ಲ್ಯಾಕ್ ಫಂಗಸ್ ನಷ್ಟು ವೈಟ್ ಫಂಗಸ್ ಅಪಾಯಕಾರಿಯಲ್ಲ ಎಂದು ದೆಹಲಿಯ ಎಲ್ಎನ್ ಜೆಪಿ ಆಸ್ಪತ್ರೆ ವೈದ್ಯ ಡಾ.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ ಒಂದೂವರೆ ತಿಂಗಳು ಚಿಕಿತ್ಸೆ ನೀಡಬೇಕು. ರೋಗವನ್ನು ಬೇಗ ಪತ್ತೆಮಾಡುವುದು ಮುಖ್ಯ. ವೈದ್ಯರ ಸಲಹೆ ಇಲ್ಲದೆ ಸ್ಟಿರಾಯ್ಡ್ ತೆಗೆದುಕೊಳ್ಳಬಾರದು. ಸುತ್ತಲಿನ ಪ್ರದೇಶ ಸ್ವಚ್ಛವಾಗಿರಬೇಕು. ದಿನಗಟ್ಟಲೆ ರೆಫ್ರಿಜರೇಟರ್ ನಲ್ಲಿಟ್ಟ ಆಹಾರ ಸೇವಿಸಬಾರದು. ಮನೆಯೊಳಗೆ ಸೂರ್ಯನ ಬೆಳಕು ಬೀಳಬೇಕು. ಶುಚಿಯಾದ ಮಾಸ್ಕ್ ಬಳಸಬೇಕು ಎಂದಿದ್ದಾರೆ.