ಬೆಂಗಳೂರು: BSY ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿ 3 ತಿಂಗಳಾದರೂ ಕ್ರಮ ಜರುಗಿಸದೆ ಇದ್ದ ಸರ್ಕಾರ ಆರೋಪಿಗೆ ರಕ್ಷಣೆಯನ್ನೇ ನೀಡಿತ್ತು ಎನ್ನುತ್ತಾರೆ ಹೋರಾಟಗಾರರು. ಸಂತ್ರಸ್ತೆಯು ಜನವಾದಿ ಮಹಿಳಾ ಸಂಘಟನೆಯನ್ನು ಸಂಪರ್ಕಿಸಿದ್ದರು. ಅಡ್ವೊಕೇಟ್ ಎಸ್.ಬಾಲನ್ ಕಾನೂನು ಸಹಕಾರಕ್ಕೆ ಒಪ್ಪಿದರು. 2 ದಿನಗಳಲ್ಲಿ ಸಂತ್ರಸ್ತೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಆದರೆ ಸಂತ್ರಸ್ತೆಯ ಪುತ್ರ ಮುಂದೆ ಬಂದು ಬಾಲನ್ ಮೂಲಕ ಹೈಕೋರ್ಟ್‌ಗೆ ಅರ್ಜಿ ಹಾಕಿದರು. ತಲೆದಂಡವಾಗುವ ಭಯದಲ್ಲಿ ಪೊಲೀಸರು ಕ್ರಮ ಜರುಗಿಸಿದರು.
ಇದನ್ನು ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿಹಾಕಲು ದರ್ಶನ್ ಕೊಟ್ಟಿದ್ದ ಹಣ ಜಪ್ತಿ
ಬಂಧನದ ಭೀತಿ: ಮಾಜಿ ಸಿಎಂ ಬಿ.ಎಸ್.ವೈ ನಡೆ ಏನು?
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಎಸ್.ಯಡಿಯೂರಪ್ಪಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಬಂಧನ ಬೀತಿಯಲ್ಲಿರುವ ಬಿಎಸ್ ವೈ ಇದೀಗ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ಹೊತ್ತಿನಲ್ಲಿ ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸಲಿದೆ ನ್ಯಾ.ಕೃಷ್ಣ ಎಸ್ ದೀಕ್ಷಿತರ ಪೀಠವು ಬಿಎಸ್ ಯಡಿಯೂರಪ್ಪ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಕುರಿತು ವಿಚಾರಣೆ ನಡೆಸಲಿದ್ದಾರೆ. ನೀರಿಕ್ಷಣಾ ಜಾಮೀನು ಕೋರಿಯು ಕೂಡ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದಾರೆ.
ಇದನ್ನು ಓದಿ: ನಟ ದುನಿಯಾ ವಿಜಯ್ ವಿಚ್ಛೇದನ ಅರ್ಜಿ ವಜಾ
ಬಿಎಸ್‌ವೈ ಬಂಧನ ವಿಚಾರ: ಗೃಹ ಸಚಿವರು ಹೇಳಿದ್ದೇನು?
ಇನ್ನು, ಮಾಜಿ ಸಿಎಂ ಬಿಎಸ್‌ವೈ ಬಂಧನ ವಿಚಾರದಲ್ಲಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಪಾತ್ರವಿದೆ ಎಂಬ BJP ಆರೋಪವನ್ನು ತಳ್ಳಿ ಹಾಕಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, BJP ಆರೋಪಗಳೆಲ್ಲ ನಿರಾಧಾರ ಎಂದಿದ್ದಾರೆ.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌ವೈ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ಅವರ ಬಂಧನಕ್ಕೆ ಕಾನೂನು ಪ್ರಕಾರ ಕ್ರಮಕೈಗೊಂಡಿದ್ದೇವೆಯೇ ಹೊರತು ಇದರಲ್ಲಿ ಯಾವುದೇ ಸೇಡಿನ ರಾಜಕಾರಣ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಲಿಂಕುಗಳು/ Important links
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
| ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |




