ಗಣೇಶ ಚತುರ್ಥಿ : ಪ್ರತಿ ಮನೆಯಲ್ಲೂ ಗಣೇಶನ ಮೂರ್ತಿ ಇರುತ್ತದೆ. ಅನೇಕ ಮನೆಗಳು ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿ ಹೊಂದಿರುತ್ತದೆ. ಗಣೇಶನ ವಿಗ್ರಹ ಖರೀದಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮನೆಯಲ್ಲಿ ಅಲಂಕೃತವಾಗಿರುವ ಗಣೇಶನ ಮೂರ್ತಿಯು ಯಾವ ಮಾದರಿಯಲ್ಲಿರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವಿಗ್ರಹದ ಬಣ್ಣ

- ಶಿವಪುರಾಣದ ಪ್ರಕಾರ, ಗಣೇಶನ ದೇಹದ ಮುಖ್ಯ ಬಣ್ಣ ಕೆಂಪು & ಹಸಿರು.
- ಇದರಲ್ಲಿ ಕೆಂಪು ಬಣ್ಣ ಶಕ್ತಿಯ ಸಂಕೇತ. ಹಸಿರು ಬಣ್ಣ ಸಮೃದ್ಧಿಯ ಸಂಕೇತ.
- ಸ್ವ-ಅಭಿವೃದ್ಧಿ ಅಥವಾ ಸಕಲ ಐಶ್ವರ್ಯ ಬಯಸುವವರು ಸಿಂಧೂರಿ ಬಣ್ಣದ ಗಣಪತಿ.
- ಐಶ್ವರ್ಯ & ಸಮೃದ್ಧಿ ಹಳದಿ ಬಣ್ಣದ ವಿಗ್ರಹದಲ್ಲಿ ಹಸಿರು ಬಣ್ಣದ ಮೂರ್ತಿ ಇಡುತ್ತಾರೆ.
- ವಾಸ್ತು ಶಾಸ್ತ್ರದ ಪ್ರಕಾರ, ಬಿಳಿ ಬಣ್ಣದ ಗಣೇಶನ ಮೂರ್ತಿ ಶಾಂತಿ & ಸಮೃದ್ಧಿ ಬಯಸುವವರಿಗೆ ಸೂಕ್ತ.
ವಿಗ್ರಹದ ವಿಶೇಷತೆ
ಬಲಗೈ ಕಡೆಗೆ ಬಾಗಿದ ಸೊಂಡಿಲದ ಗಣೇಶನು ಹಠಮಾರಿ & ಅವನಿಗೆ ಮಾಡುವ ಪೂಜೆಯ ವಿಧಿ ವಿಧಾನಗಳು ಕಷ್ಟಕರವಾಗಿರುತ್ತದೆ. ವಿಗ್ರಹವು ಮೋದಕ, ಲಡ್ಡುಗಳನ್ನು & ಮೂಷಿಕವನ್ನು ಹೊಂದಿರಬೇಕು. ಗಣೇಶನಿಗೆ ನಾಲ್ಕು ತೋಳುಗಳಿವೆ – ಮೊದಲ ಕೈಯಲ್ಲಿ ಅಂಕುಶ, ಎರಡನೇ ಕೈಯಲ್ಲಿ ಪಾಶ, ಮೂರನೇ ಕೈಯಲ್ಲಿ ಮೋದಕ ಮತ್ತು ನಾಲ್ಕನೇ ಕೈಯಲ್ಲಿ ಆಶೀರ್ವಾದ ನೀಡುತ್ತಾನೆ.
ವಿಗ್ರಹದ ಆಕಾರ
ಶಾಸ್ತ್ರಗಳ ಪ್ರಕಾರ, ಮನೆಯ ಪೂಜಾ ಕೋಣೆಯಲ್ಲಿ ಇಡುವ ದೇವ ದೇವತೆಗಳ ವಿಗ್ರಹಗಳ ಗಾತ್ರವು 3 ಇಂಚುಗಳಿಗಿಂತ ಹೆಚ್ಚಿರಬಾರದು. ವಿಗ್ರಹಗಳನ್ನು ನಮ್ಮ ಹೆಬ್ಬೆರಳಿನ ಉದ್ದಕ್ಕೆ ಸಮನಾಗಿ ಇಡಬೇಕು. ಹೆಬ್ಬೆರಳಿನ ಗಾತ್ರಕ್ಕಿಂತ ದೊಡ್ಡದಾದ ವಿಗ್ರಹಗಳನ್ನು ಮನೆಯ ದೇವರ ಕೋಣೆಯಲ್ಲಿ ಇಡಬಾರದು ಮತ್ತು ನೀವು ಗಣೇಶನ ವಿಗ್ರಹವನ್ನು ಕನಿಷ್ಠ ಒ೦ದು ಅಡಿ ಇಡಬಹುದು.




