‘ಚಿನ್ನ’ದ ಹುಡುಗಿ ಮೀರಾಬಾಯಿ ಚಾನುಗೆ ಬಂಗಾರ: ಮೀರಾಬಾಯಿ ಸಾಧನೆಗೆ ರಾಷ್ಟ್ರಪತಿ ಅಭಿನಂದನೆ

2020ರ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದು ಬಿಗಿದ್ದು, 49ಕೆಜಿ ವಿಭಾಗದಲ್ಲಿ ಮೀರಾಬಾಯಿ, 201 ಕೆಜಿ ಭಾರವನ್ನು ಎತ್ತುವ ಮೂಲಕ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ. ಹೌದು,…

Mirabai-Chanu-vijayaprabha-news

2020ರ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದು ಬಿಗಿದ್ದು, 49ಕೆಜಿ ವಿಭಾಗದಲ್ಲಿ ಮೀರಾಬಾಯಿ, 201 ಕೆಜಿ ಭಾರವನ್ನು ಎತ್ತುವ ಮೂಲಕ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಹೌದು, ಸ್ನ್ಯಾಚ್‌ನಲ್ಲಿ 88KG, ಕ್ಲೀನ್ ಮತ್ತು ಜರ್ಕ್‌ನಲ್ಲಿ 113KG ತೂಕ ಎತ್ತಿದ ಮೀರಾಬಾಯಿ ಚಾನು, 2ನೇ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಂಗಾರವನ್ನು ಜಯಿಸಿದ್ದಾರೆ. ಇನ್ನು, 2018ರಲ್ಲಿ 49ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನ ಗೆದ್ದಿದ್ದರು.

ಮೀರಾಬಾಯಿ ಸಾಧನೆಗೆ, ರಾಷ್ಟ್ರಪತಿ ಅಭಿನಂದನೆ:

Vijayaprabha Mobile App free

ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಮೀರಾಬಾಯಿ ಚಾನು ರವರಿಗೆ, ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಹೌದು, ‘ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ. ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತಕ್ಕೆ ಆಕೆಯ ಮೊದಲ ಚಿನ್ನದ ಪದಕ ದೇಶದಾದ್ಯಂತ ಸಂತೋಷ ಮತ್ತು ಸಂಭ್ರಮದ ಅಲೆಯನ್ನು ಸೃಷ್ಟಿಸಿದೆ. ಭಾರತವು ನಿಮ್ಮ ಮತ್ತು ನಿಮ್ಮ ಪದಕಗಳ ಬಗ್ಗೆ ಹೆಮ್ಮೆಪಡುತ್ತದೆ’, ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಟ್ವೀಟ್ ಮಾಡಿದ್ದಾರೆ.

ಮೀರಾಬಾಯಿ ಚಾನು ಗೆದ್ದ ಪದಕಗಳು:

➧ 2020 ಟೋಕಿಯೋ ಒಲಿಂಪಿಕ್ಸ್ – ಕಂಚು (49ಕೆಜಿ)
➧ 2017 ಅನಾಹೈಮ್ ವಿಶ್ವ ಚಾಂಪಿಯನ್ – ಚಿನ್ನ (48ಕೆಜಿ)
➧ 2020 ಏಷ್ಯನ್ ಚಾಂಪಿಯನ್ – ಬೆಳ್ಳಿ (49ಕೆಜಿ)
➧ 2014- ಕಾಮನ್‌ವೆಲ್ತ್‌ ಗೇಮ್ಸ್ – ಕಂಚು (48ಕೆಜಿ)
➧ 2018- ಕಾಮನ್‌ವೆಲ್ತ್‌ ಗೇಮ್ಸ್ – ಚಿನ್ನ (48ಕೆಜಿ)
➧ 2022- ಕಾಮನ್‌ವೆಲ್ತ್‌ ಗೇಮ್ಸ್ – ಚಿನ್ನ (49ಕೆಜಿ)
➧ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳು – 2013, 2017, 2019ರಲ್ಲಿ ಚಿನ್ನ ಹಾಗೂ 2015ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.