ಮೈಸೂರು: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಪ್ರೇಮಿಗಳು ಮದುವೆಯಾಗಿದ್ದು, ಖುದ್ದು ಗ್ರಾಮ ಪಂಚಾಯಿತಿ ಪಿಡಿಒ ಅವರೇ ಪೌರೋಹಿತ್ಯ ವಹಿಸಿ ಗಲಾಟೆ ನಡುವೆಯೇ ಯುವ ಜೋಡಿಯನ್ನು ಒಂದುಗೂಡಿಸಿರುವ ಅಪರೂಪದ ಮದುವೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಇನ್ನು,ಈ ಮದ್ವೆ ಗ್ರಾಪಂ ವಾರ್ಡ್ ಸಭೆಯಲ್ಲೇ ವಾರ್ಡ್ ಸದಸ್ಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ನೆರವೇರಿದ್ದು, ಹರದನಹಳ್ಳಿ ಗ್ರಾಮದ ಬಸವರಾಜು(24) ಮತ್ತು ಸುಚಿತ್ರಾ(19) ಇಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿತ್ತು.
ಇನ್ನು,ಮದುವೆಗೆ ಇಬ್ಬರ ಮನೆಯಲ್ಲೂ ವಿರೋಧವಿದ್ದ ಕಾರಣ ಪ್ರೇಮಿಗಳು ಒಬ್ಬರನ್ನೊಬ್ಬರು ಬಿಟ್ಟು ಬದುಕಲ್ಲ, ಮದುವೆ ಮಾಡಿ ಎಂದು ಪಟ್ಟು ಹಿಡಿದಿದ್ದರು. ಹೆತ್ತವರು ಎಷ್ಟೇ ಮನವೊಲಿಸಿದರೂ ಈ ಜೋಡಿ ಒಪ್ಪಿರಲಿಲ್ಲ ಕಾರಣ, ಇದೇ ವಿಚಾರವಾಗಿ ಎರಡೂ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು.