ಹಾವೇರಿ: ಹಾವೇರಿಯ ಕಾಗಿನೆಲೆಯ ಶ್ರೀಮಠದ ಕಾಗಿನೆಲೆ ಕನಕಗುರುಪೀಠ ಆವರಣದಲ್ಲಿ ಕುರುಬರ ಎಸ್.ಟಿ.ಹೋರಾಟ ಸಮಿತಿಯ ಬೃಹತ್ ಐತಿಹಾಸಿಕ ಪಾದಯಾತ್ರೆಗೆ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಗಿನೆಲೆ ಪೀಠಾಧ್ಯಕ್ಷರಾದ ನಿರಂಜನಾನಂದಪುರಿ ಮಹಾಸ್ವಾಮಿಗಳು, ನೂತನ ಸಚಿವರಾದ ಎಂಟಿಬಿ ನಾಗರಾಜ, ಎಚ್. ಎಂ ರೇವಣ್ಣ, ಸಚಿವರಾದ ಕೆ ಎಸ್ ಈಶ್ವರಪ್ಪ ಸೇರಿದಂತೆ ಅನೇಕ ಕುರುಬ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ; ಫಲ ಸಿಗುವವರೆಗೂ ಹೋರಾಟ: ಶ್ರೀ ನಿರಂಜನಾನಂದಪುರಿ
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಕನಕಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಇಂದು ಮಾತನಾಡಿದ್ದು, ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಫೆ.7ರಂದು ಬೃಹತ್ ಸಮಾವೇಶ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ವೇಳೆ, ನಮಗೆ ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಫಲ ಸಿಗುವವರೆಗೆ ನಾವು ಹೋರಾಟವನ್ನು ಮಾಡುತ್ತಲೇ ಇರುತ್ತೇವೆ. ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ನಿರಂಜನಾನಂದಪುರಿ ಶ್ರೀಗಳು ಸ್ಪಷ್ಟಪಡಿಸಿದರು.
ಇದನ್ನು ಓದಿ: ಕುರುಬರ ಎಸ್ ಟಿ ಮೀಸಲಾತಿ ರಣಕಹಳೆ; ಸಮುದಾಯದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ತಪ್ಪಿಸಲು ಹೋರಾಟ: ಶ್ರೀ ನಿರಂಜನಾನಂದ ಪುರಿ
ಇದನ್ನು ಓದಿ: ಮಕರ ಸಂಕ್ರಾಂತಿ ದಿನದಂದು ಕುರುಬರ ದಿಕ್ಕು ಬದಲಾಗಲಿದೆ: ನಿರಂಜನಾನಂದಪುರಿ ಶ್ರೀ