ದಾವಣಗೆರೆ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿ ನಾವು ವಲಸೆ ಶಾಸಕರಲ್ಲ, ಬಿಜೆಪಿ ಶಾಸಕರು ಎಂದು ಹೇಳಿಕೆ ನೀಡಿದ್ದಾರೆ.
ಈ ವೇಳೆ ಹೊನ್ನಾಳಿಯಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್ ಅವರು, ಚುನಾವಣೆಯಲ್ಲಿ ಗೆದ್ದು ಬರುವುದಕ್ಕೂ ಮೊದಲು ನಮ್ಮನ್ನು ಅನರ್ಹರು ಎನ್ನುತ್ತಿದ್ದರು. ಸದ್ಯ ನಾವು ಉಪ ಚುನಾವಣೆಯಲ್ಲಿ ಗೆದ್ದು ಬಂದಿದ್ದೇವೆ. ಈಗ ನಮ್ಮನ್ನು ವಲಸಿಗರು ಎಂದು ಕರೆಯಲಾಗುತ್ತಿದೆ. ಆದರೆ ನಾವು ಕಾಂಗ್ರೆಸ್ ಪಕ್ಷಕ್ಕೆ ಡೈವೋರ್ಸ್ ನೀಡಿ ಬಂದಿದ್ದೇವೆ. ಮತ್ತೆ ಅದೇ ಪಕ್ಷವನ್ನು ಸೇರಿಕೊಳ್ಳಲು ಸಾಧ್ಯವೇ ಎಂದು ಪತ್ರಕರ್ತರನ್ನು ಸಚಿವರು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ರಾಜ್ಯದ ಜನತೆಗೆ ಸಿಹಿಸುದ್ದಿ: ಇಂದಿನಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ