Vrishchika Sankranti | ಪೂಜಾ ವಿಧಾನ ಮತ್ತು ಮಹತ್ವ

Vrishchika Sankranti : ಒ೦ದು ರಾಶಿಯಿ೦ದ ಇನ್ನೊಂದು ರಾಶಿಗೆ ಸೂರ್ಯನ ಪರಿವರ್ತನೆಯನ್ನು ಸಂಕ್ರಾಂತಿ ಎ೦ದು ಕರೆಯಲಾಗುತ್ತದೆ. ತುಲಾ ರಾಶಿಯಲ್ಲಿ ಸ್ಥಿತನಾಗಿದ್ದ ಸೂರ್ಯನು ತುಲಾ ರಾಶಿಯಿಂದ ಹೊರಬಂದು ವೃಶ್ಚಿಕ ರಾಶಿಗೆ ಪ್ರವೇಶಿಸುವ ಈ ದಿನವು ವೃಶ್ಚಿಕ…

Vrishchika Sankranti

Vrishchika Sankranti : ಒ೦ದು ರಾಶಿಯಿ೦ದ ಇನ್ನೊಂದು ರಾಶಿಗೆ ಸೂರ್ಯನ ಪರಿವರ್ತನೆಯನ್ನು ಸಂಕ್ರಾಂತಿ ಎ೦ದು ಕರೆಯಲಾಗುತ್ತದೆ. ತುಲಾ ರಾಶಿಯಲ್ಲಿ ಸ್ಥಿತನಾಗಿದ್ದ ಸೂರ್ಯನು ತುಲಾ ರಾಶಿಯಿಂದ ಹೊರಬಂದು ವೃಶ್ಚಿಕ ರಾಶಿಗೆ ಪ್ರವೇಶಿಸುವ ಈ ದಿನವು ವೃಶ್ಚಿಕ ಸಂಕ್ರಾಂತಿಯಾಗಿದ್ದು, ವಿಶೇಷ ಮಹತ್ವವನ್ನು ಹೊಂದಿದೆ. ಈ ಬಾರಿ ಸಂಕ್ರಾಂತಿಯ ಕ್ಷಣ ಬೆಳಿಗ್ಗೆ 07:33 ಆಗಿರಲಿದೆ.

ವೃಶ್ಚಿಕ ಸಂಕ್ರಾಂತಿ ಪೂಜಾ ವಿಧಾನ (Vrishchika Sankranti Pooja method)

ಈ ದಿನ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನ ಕರ್ಮಾದಿಗಳನ್ನು ಮುಗಿಸಿಕೊಳ್ಳಬೇಕು. ಬಳಿಕ ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ ಅದರಲ್ಲಿ ಕೆಂಪು ಚಂದನವನ್ನು ಬೆರೆಸಿ ಸೂರ್ಯನಿಗೆ ಅರ್ಥ್ಯವನ್ನು ಸಮರ್ಪಿಸಬೇಕು. ಅಥವಾ ಕು೦ಕುಮ, ಕೆಂಪು ಬಣ್ಣದ ಹೂವು, ಅರಿಶಿನ ಬೆರೆಸಿದ ನೀರನ್ನು ಸೂರ್ಯ ದೇವನಿಗೆ ಅರ್ಪಿಸಬಹುದು.

ಇದನ್ನೂ ಓದಿ: Panchanga | ಇಂದು ಶನಿವಾರ 16-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

Vijayaprabha Mobile App free

ಕೆಂಪು ವಸ್ತುಗಳ ಬಳಕೆ

ಸೂರ್ಯನಿಗೆ ದೀಪವನ್ನು ಹಚ್ಚುವಾಗ ಕೆಂಪು ಚಂದನವನ್ನು ತುಪ್ಪದಲ್ಲಿ ಬೆರೆಸಿ ದೀಪವನ್ನು ದೀಪವ ಬೆಳಗಬೇಕು. ಅಲ್ಲದೆ ಪೂಜೆಯಲ್ಲಿ ಕೆಂಪು ಬಣ್ಣದ ಹೂಗಳನ್ನು ಮಾತ್ರ ಬಳಸಬೇಕು. ಬೆಲ್ಲದಿಂದ ಮಾಡಿದ ಹಲ್ವಾ ಅಥವಾ ಸಿಹಿಯನ್ನು ಅರ್ಪಿಸಬೇಕು. ಪೂಜೆಯ ವೇಳೆ ಓಂ ದಿನಕರಾಯ ನಮಃ ಅಥವಾ ಯಾವುದೇ ಸೂರ್ಯ ದೇವನ ಮಂತ್ರಗಳನ್ನು ಪಠಿಸಬೇಕು

ಪಿತೃ ದೋಷ ದೂರ

ಸಂಕ್ರಾಂತಿಯ ಸಮಯದಲ್ಲಿ ಸೂರ್ಯ ದೇವರನ್ನು ನಿಯಮಾನುಸಾರ ಪೂಜಿಸಿದರೆ, ಸೂರ್ಯ ದೋಷ ಮತ್ತು ಪಿತೃ ದೋಷಗಳು ದೂರವಾಗುತ್ತವೆ. ಅಲ್ಲದೆ ಮರಣಾನಂತರ ವ್ಯಕ್ತಿಯು ಸೂರ್ಯ ಲೋಕವನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಕೂಡ ಇದೆ.

ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 16-11-2024 ಶನಿವಾರ

ದಾನ & ತರ್ಪಣ

ವೃಶ್ಚಿಕ ಸಂಕ್ರಾಂತಿಯಂದು (Vrishchika Sankranti) ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು ಹಾಗೂ ಪಿತೃಗಳಿಗೆ ಶ್ರಾದ್ಧ ಮತ್ತು ತರ್ಪಣವನ್ನು ನೀಡಬೇಕು. ಈ ದಿನದಂದು ಬ್ರಾಹ್ಮಣರಿಗೆ ಮತ್ತು ಬಡವರಿಗೆ ಇತ್ಯಾದಿಗಳನ್ನು ದಾನ ಅನ್ನ, ವಸ್ತ್ರ, ಗೋವು ಇತಾ ಮಾಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.

ಸೂರ್ಯನ ಈ ಮಂತ್ರಗಳನ್ನು ಪಠಿಸಿ

ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ ಆಯು‌ರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ|

ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಕ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.