ಇಂದು ಕೇಂದ್ರ ಸಂಪುಟ ವಿಸ್ತರಣೆ; ಐತಿಹಾಸಿಕ ದಾಖಲೆ ಬರೆಯಲಿದೆ ಮೋದಿ ಸಂಪುಟ!

ನವದೆಹಲಿ: ಮೋದಿ ಸಂಪುಟದ ವಿಸ್ತರಣೆಯ ಚರ್ಚೆಗಳ ಮಧ್ಯೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ಇಂದು ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಸುಮಾರು 2 ಡಜನ್ ಸಂಸದರಿಗೆ ಸಂಪುಟದಲ್ಲಿ…

narendra modi vijayaprabha

ನವದೆಹಲಿ: ಮೋದಿ ಸಂಪುಟದ ವಿಸ್ತರಣೆಯ ಚರ್ಚೆಗಳ ಮಧ್ಯೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ಇಂದು ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಸುಮಾರು 2 ಡಜನ್ ಸಂಸದರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಅಲ್ಲದೆ, ಸಣ್ಣ ಸಮುದಾಯಗಳನ್ನು ಪ್ರತಿನಿಧಿಸುವ ಸಂಸದರು, ಮಹಿಳಾ ಸಂಸದರಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವವರಿಗೆ ಮೋದಿ ಸಂಪುಟದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ ಎನ್ನಲಾಗಿದೆ.

ಐತಿಹಾಸಿಕ ದಾಖಲೆ ಬರೆಯಲಿದೆ ಮೋದಿ ಸಂಪುಟ:

Vijayaprabha Mobile App free

ಪ್ರಧಾನಿ ಮೋದಿ ಇಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಿದ್ದು, ಈ ಸಂಪುಟವು ದೇಶದ ಇತಿಹಾಸದಲ್ಲೇ ಅತ್ಯಂತ ‘ಯುವ ಕ್ಯಾಬಿನೆಟ್’ ಆಗಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೌದು, ಮೋದಿ ಹೊಸ ಸಂಪುಟದಲ್ಲಿ ಈವರೆಗಿನ ಸರಾಸರಿ ವಯಸ್ಸಿಗಿಂತ ಕಿರಿಯರು ಹಾಗೂ ಅತಿಹೆಚ್ಚು ಶೈಕ್ಷಣಿಕ ಅರ್ಹತೆಯುಳ್ಳವರಿಗೆ ಸ್ಥಾನ ನೀಡಲಾಗುತ್ತದೆ. ಪಿಎಚ್‌ಡಿ, ಎಂಬಿಎ, ಸ್ನಾತಕೋತ್ತರ ಪದವಿ ಪಡೆದವರು ಹಾಗೂ ವೃತ್ತಿಪರ ಸಂಸದರು ಮೋದಿ ಸಂಪುಟ ಸೇರಲಿದ್ದಾರೆ ಎನ್ನಲಾಗುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.