ವಿಜಯನಗರ ಜಿಲ್ಲೆಯ ಘೋಷಣೆ; ಐತಿಹಾಸಿಕ ನಿರ್ಧಾರಕ್ಕೆ ಧನ್ಯವಾದ ಅಂದ್ರು ಸಚಿವ ಆನಂದ್ ಸಿಂಗ್ !

ಬಳ್ಳಾರಿ: ವಿಜಯನಗರ ಜಿಲ್ಲೆಯ ಘೋಷಣೆ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೌಚಾರಿಕ ಅಸ್ತು ನೀಡಿದ್ದು, ಅಂತಿಮ ನಿರ್ಧಾರ ಘೋಷಣೆ ಬಾಕಿ ಇದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸಚಿವ ಮಾಧುಸ್ವಾಮಿ…

anand singh minister

ಬಳ್ಳಾರಿ: ವಿಜಯನಗರ ಜಿಲ್ಲೆಯ ಘೋಷಣೆ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೌಚಾರಿಕ ಅಸ್ತು ನೀಡಿದ್ದು, ಅಂತಿಮ ನಿರ್ಧಾರ ಘೋಷಣೆ ಬಾಕಿ ಇದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸಚಿವ ಮಾಧುಸ್ವಾಮಿ ವಿಷಯ ಪ್ರಸ್ತಾಪಿಸಿದ್ದು, ಸರ್ಕಾರದ ನಿರ್ಧಾರವನ್ನು ಸಚಿವ ಆನಂದ್ ಸಿಂಗ್ ಸ್ವಾಗತಿಸಿದ್ದಾರೆ.

ವಿಜಯನಗರ ಕ್ಷೇತ್ರ ಹಿಂದೆ ಹಿಂದೂ ಸಾಮ್ರಾಜ್ಯವಾಗಿತ್ತು. ವಿಜಯನಗರ ಜಿಲ್ಲೆ ಘೋಷಣೆ ಐತಿಹಾಸಿಕ ನಿರ್ಧಾರವಾಗಿದೆ. ಜಿಲ್ಲೆಯ ಜನರ ಪರವಾಗಿ ನಾನು ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ರೆಡ್ಡಿ ಬ್ರದರ್ಸ್ ಅಸಮಾಧಾನ

ವಿಜಯನಗರ ಜಿಲ್ಲೆ ಘೋಷಣೆಗೆ ಸಚಿವ ಆನಂದ್ ಸಿಂಗ್ ಅವರಿಂದ ಬಹುದಿನದ ಬೇಡಿಕೆ ಇತ್ತು. ಈ ಕುರಿತು ಅವರು ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ಜಿಲ್ಲೆಯ ರಚನೆಗೆ ಕಾಲ ಸನ್ನಿತವಾಗಿದೆ. ಆದರೆ ಈ ಕುರಿತು ಬಳ್ಳಾರಿ ರೆಡ್ಡಿ ಸಹೋದರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶಾಸಕ ಸೋಮಶೇಖರ ರೆಡ್ಡಿ ಬೇಸರ ವ್ಯಕ್ತಡಿಸಿದ್ದಾರೆ. ಬಳ್ಳಾರಿ ಸಮಗ್ರತೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.