ವಾಟ್ಸ್‌ಆ್ಯಪ್‌ನಲ್ಲಿ ಒಂದೇ ಬಾರಿಗೆ ಒಟ್ಟು 32 ಜನರಿಗೆ ವಿಡಿಯೋ ಕರೆ ಮಾಡುವ ಸೌಲಭ್ಯ ಶೀಘ್ರವೇ ಲಭ್ಯವಾಗಲಿದ್ದು, ಈ ಸೇವೆಯ ಪರೀಕ್ಷಾರ್ಥ ಬಳಕೆಯನ್ನು ವಾಟ್ಸ್‌ಆ್ಯಪ್ ಕಂಪನಿ ಆರಂಭಿಸಿದೆ.
ಹೌದು, ಧ್ವನಿ ಕರೆ ಹಾಗೂ ವಿಡಿಯೋ ಕರೆಗಳ ಲಿಂಕ್ ಸೌಲಭ್ಯ ಈ ವಾರದಿಂದ ಸಿಗಲಿದೆ. ಆಗ ನೀವು ಲಿಂಕ್ ಅನ್ನು ಇತರರ ಜೊತೆ ಹಂಚಿಕೊಂಡಾಗ, ಅವರು ಆ ಲಿಂಕ್ ಬಳಸಿ ಕರೆ ಮಾಡಬಹುದು. ಈ ಸೇವೆಯಿಂದ ಗುಂಪು ಕರೆ ಹಾಗೂ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್‌ಗಳ ನಡುವೆ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು, ಇದಕ್ಕಾಗಿ WhatsAppನ ‘ಕಾಲ್’ ವಿಭಾಗಕ್ಕೆ ಹೋಗಿ ನೀವು ಲಿಂಕ್ ರಚಿಸಬಹುದು. ಆದ್ರೆ ಇದಕ್ಕಾಗಿ ಮೊದಲು ಆ್ಯಪ್ ಅಪ್‌ಡೇಟ್ ಮಾಡಬೇಕು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.