ಬೆಂಗಳೂರು: ಕೆಲ ದಿನಗಳಿಂದ ಟೊಮೆಟೊ, ನುಗ್ಗೆಕಾಯಿ, ಬೆಂಡೆಕಾಯಿ ಬೆಲೆಗಳಲ್ಲಿ ತೀವ್ರಗತಿಯಲ್ಲಿ ಕುಸಿತ ಕಾಣುತ್ತಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹12 ಇತ್ತು. ಈಗ ಇದು ₹5ಕ್ಕೆ ಕಡಿಮೆಯಾಗಿದೆ. ಇನ್ನು ನುಗ್ಗೆಕಾಯಿ ₹80ರಿಂದ ₹40, ನುಗ್ಗೆಕಾಯಿ ಕೆ.ಜಿಗೆ ₹80ರಿಂದ ₹40ಕ್ಕೆ ಕಡಿಮೆಯಾಗಿದ್ದು, ಬೆಂಡೆಕಾಯಿ ₹16ರಿಂದ ₹6, ಹೀರೆಕಾಯಿ ₹18ರಿಂದ ₹16, ಪಡುವಲಕಾಯಿ ₹10ರಿಂದ ₹9ಕ್ಕೆ ಇಳಿಕೆ ಕಂಡಿವೆ. ಆದರೆ ಬೀನ್ಸ್, ದಪ್ಪಮೆಣಸಿನಕಾಯಿ, ಎಲೆಕೋಸು ಸೇರಿದಂತೆ ಕೆಲ ತರಕಾರಿ ಬೆಲೆಗಳು ಹೆಚ್ಚಾಗಿವೆ.
ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ:

ಇನ್ನು ಕಳೆದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಒಂದು ಕೆ.ಜಿ ಈರುಳ್ಳಿ ದರ 100ರಿಂದ 150 ರೂ.ವರೆಗೆ ತಲುಪಿತ್ತು. ಅಷ್ಟು ಹಣ ಕೊಟ್ಟರೂ, ಗುಣಮಟ್ಟದ ಈರುಳ್ಳಿ ಸಿಗುತ್ತಿರಲಿಲ್ಲ. ಈಗ ಕೆ.ಜಿ.ಯ ದರಕ್ಕೆ ಒಂದು ಮೂಟೆ ಈರುಳ್ಳಿ ಸಿಗುತ್ತಿದ್ದು, ಮಹಾರಾಷ್ಟ್ರದ ಈರುಳ್ಳಿಯ 50 ಕೆ.ಜಿ ಮೂಟೆಯ ದರ ಕೇವಲ 250 ರೂ! ಇನ್ನು ನೂರು ಕೆ.ಜಿ.ಯ ಮೂಟೆಗೆ ಕೇವಲ 500 ರೂ.ನಿಂದ 1,500 ರೂ. ಬೆಲೆಯಿದೆ. ಇನ್ನು ಕರ್ನಾಟಕದ ಈರುಳ್ಳಿಗೆ ಸಗಟು ದರದಲ್ಲಿ ನೂರು ಕೆ.ಜಿ.ಯ ಮೂಟೆಗೆ 500 ರೂಪಾಯಿಂದ 1,400 ರೂಪಾಯಿ ಬೆಲೆಯಿದೆ.




