Vande Bharat Sleeper: ರಾತ್ರಿ ಪ್ರಯಾಣವನ್ನು ಸುಖಕರವಾಗಿಸಲಿದೆ ವಂದೇ ಭಾರತ್ ಸ್ಲೀಪರ್ ರೈಲು

ಚೆನ್ನೈ: ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಮಾದರಿಯ ರೈಲುಗಳ ಆವೃತ್ತಿಯನ್ನು ಪ್ರಾರಂಭಿಸಲು ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸಜ್ಜಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ವಂದೇ ಭಾರತ್‌ನ ಚಿತ್ರಗಳು, ರೈಲಿನ ಒಳವಿನ್ಯಾಸ, ಐಷಾರಾಮಿ ವ್ಯವಸ್ಥೆಗಳು ಮತ್ತು…

ಚೆನ್ನೈ: ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಮಾದರಿಯ ರೈಲುಗಳ ಆವೃತ್ತಿಯನ್ನು ಪ್ರಾರಂಭಿಸಲು ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸಜ್ಜಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ವಂದೇ ಭಾರತ್‌ನ ಚಿತ್ರಗಳು, ರೈಲಿನ ಒಳವಿನ್ಯಾಸ, ಐಷಾರಾಮಿ ವ್ಯವಸ್ಥೆಗಳು ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ತೋರಿಸುತ್ತಿದೆ.

ಈಗಾಗಲೇ ಮೆಟ್ರೋ ಹಾಗೂ ಕುಳಿತು ಪ್ರಯಾಣಿಸುವ ಮಾದರಿಯ ಬೋಗಿಗಳನ್ನು ಹೊಂದಿರುವ ವಂದೇ ಭಾರತ್‌ ರೈಲಿಗೆ ಸ್ಲೀಪರ್ ಕೋಚ್‌ಗಳು ಹೊಸ ಸೇರ್ಪಡೆಯಾಗಲಿವೆ. ರಾತ್ರಿಯ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ಸ್ಲೀಪರ್ ಕೋಚ್‌ಗಳು ಸುಮಾರು 800 ಕಿ.ಮೀ ಮತ್ತು 1,200 ಕಿ.ಮೀ ಅಂತರವನ್ನು ಹೊಂದಿರುವಂತಹ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ, ಸುಮಾರು 820 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು 16 ಕೋಚ್‌ಗಳನ್ನು ಒಳಗೊಂಡಿದೆ. ಗಂಟೆಗೆ 160 ಕಿಲೋಮೀಟರ್‌ಗಳ ಗರಿಷ್ಠ ವೇಗದೊಂದಿಗೆ, ಹೊಸ ರೈಲು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

Vijayaprabha Mobile App free

ವಂದೇ ಭಾರತ್ ಸ್ಲೀಪರ್ ರೈಲು ಇತರೆ ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ತುರ್ತು ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಆ‌್ಯಂಟಿ ಕೊಲೀಷನ್ ಮತ್ತು ಆ‌್ಯಂಟಿ-ಕ್ಲೈಂಬಿಂಗ್ ತಂತ್ರಜ್ಞಾನ ಒಳಗೊಂಡಿರುವ “ಕವಚ್”ನ್ನು ಸಹ ಒಳಗೊಂಡಿದೆ. ಇದು ಅಪಘಾತಗಳ ಸಮಯದಲ್ಲಿ ಬೋಗಿಗಳು ಒಂದರ ಮೇಲೊಂದು ಬೀಳುವುದನ್ನು ತಡೆಯುತ್ತದೆ.

ಸ್ಲೀಪರ್ ವಂದೇ ಭಾರತ್ ರೈಲು ಅಧಿಕೃತವಾಗಿ ಆರಂಭವಾಗುವ ಮುನ್ನ ಹಲವಾರು ಪರೀಕ್ಷೆಗಳಿಗೆ ಒಳಪಡಲಿದೆ. ಮುಂದಿನ ಎರಡು ತಿಂಗಳಲ್ಲಿ, ರೈಲಿನ ಸುರಕ್ಷತೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಪರಿಶೀಲಿಸಲು 90 kmph ನಿಂದ 180 kmph ವರೆಗಿನ ವೇಗದಲ್ಲಿ ಚಲಾಯಿಸಿ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯು ಲಕ್ನೋ ಆರ್‌ಡಿಎಸ್‌ಒ ಮತ್ತು ಪಶ್ಚಿಮ ರೈಲ್ವೆ ಸೌಲಭ್ಯಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳನ್ನು ನವೆಂಬರ್ 15 ರೊಳಗೆ ಪೂರ್ಣಗೊಳಿಸಲು ನಿಗದಿಪಡಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.