ಬೆಂಗಳೂರು: ನರೇಂದ್ರ ಮೋದಿ – ಅಮಿತ್ ಷಾ ಸರಕಾರ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಿದೆ ಎಂದು ಸಚಿವ ವಿ ಸೋಮಣ್ಣ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಕೊಂಡಾಡಿದ್ದಾರೆ
ಈ ಕುರಿತು ಸಚಿವ ಸೋಮಣ್ಣ ಟ್ವೀಟ್ ಮಾಡಿದ್ದೂ, ಜಗತ್ತಿನ ಅತ್ಯಂತ ದೊಡ್ಡ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ, ಬಳಿಕ ದೇಶದ ಎರಡನೇ ಅತ್ಯುನ್ನತ ಹುದ್ದೆಯಾದ ಗೃಹ ಸಚಿವರ ಸ್ಥಾನ ಅಲಂಕರಿಸಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜೊತೆಗೂಡಿ ದೇಶಭ್ರಷ್ಟರ ಮತ್ತು ಭಯೋತ್ಪಾದಕರಿಗೆ ಸಿಂಹಸ್ವಪ್ನವಾದ ಶ್ರೀ ಅಮಿತ್ ಷಾ ಅವರನ್ನು ಕರ್ನಾಟಕ ಸ್ವಾಗತಿಸುತ್ತಿದೆ.
ಅಯೋಧ್ಯೆ ವಿವಾದ, ಕಾಶ್ಮೀರದ ವಿವಾದ ಸೌಹಾರ್ದಯುತವಾಗಿ ನ್ಯಾಯಾಲಯದಲ್ಲಿ ಬಗೆಹರಿದಿದ್ದು, ಅಸಂಖ್ಯಾತ ರಾಮಭಕ್ತರ ಮತ್ತು ದೇಶಭಕ್ತರ ಸಂಭ್ರಮ ಮುಗಿಲುಮುಟ್ಟಿದೆ. ಶ್ರೀ
ನರೇಂದ್ರ ಮೋದಿ – ಶ್ರೀ ಅಮಿತ್ ಷಾ ಸರಕಾರ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಿದೆ.
ಶ್ರೀ ಅಮಿತ್ ಷಾ ಗೃಹ ಸಚಿವರಾದ ಬಳಿಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದಾಗಿದೆ, ಅಯೋಧ್ಯಾ ವಿವಾದ ಬಗೆಹರಿದಿದೆ, ರೈತಪರ ಕಾಯ್ದೆ ಜಾರಿಗೊಳಿಸಲಾಗಿದೆ. ಇದು ಅಖಂಡ ಭಾರತಕ್ಕೊಂದು ಮುನ್ನುಡಿ
ರಾಜಕೀಯ ಇತಿಹಾಸದಲ್ಲಿ ಶ್ರೀ ಅಮಿತ್ ಷಾ ಅವರ ಹೆಸರು ಚಾಣಕ್ಯನಷ್ಟೇ ಅಜರಾಮರವಾಗಿ ಉಳಿಯಲಿದೆ. ದೇಶವನ್ನು ಕೊಳ್ಳೆ ಹೊಡೆದ ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡುತ್ತಿರುವುದಕ್ಕಾಗಿ ದೇಶವಾಸಿಗಳ ಹೃದಯದಲ್ಲಿ ಮಾನ್ಯ ಮೋದಿ-ಶಾ ಅವರ ಹೆಸರು ರಾರಾಜಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಅಮಿತ್ ಷಾ ಗೃಹ ಸಚಿವರಾದ ಬಳಿಕದ ಬದಲಾಗುತ್ತಿದೆ ಭಾರತದ ಚಿತ್ರಣ.
√ ಶಂಕಿತ ಉಗ್ರರನ್ನು ಉಗ್ರಗಾಮಿಗಳೆಂದು ಘೋಷಿಸುವ ಮಸೂದೆ ಅಂಗೀಕಾರ.
√ ಉಗ್ರರ ಹೆಡೆಮುರಿ ಕಟ್ಟಲು ಕಾನೂನಿನ ಬಲ ಎಂದು ಸಚಿವ ವಿ ಸೋಮಣ್ಣ ಟ್ವೀಟ್ ಮಾಡಿದ್ದಾರೆ.
ಅಯೋಧ್ಯೆ ವಿವಾದ, ಕಾಶ್ಮೀರದ ವಿವಾದ ಸೌಹಾರ್ದಯುತವಾಗಿ ನ್ಯಾಯಾಲಯದಲ್ಲಿ ಬಗೆಹರಿದಿದ್ದು, ಅಸಂಖ್ಯಾತ ರಾಮಭಕ್ತರ ಮತ್ತು ದೇಶಭಕ್ತರ ಸಂಭ್ರಮ ಮುಗಿಲುಮುಟ್ಟಿದೆ. ಶ್ರೀ @narendramodi – ಶ್ರೀ @amitshah ಸರಕಾರ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಿದೆ. #JanaSevaka
— V. Somanna (@VSOMANNA_BJP) January 17, 2021