ಬೆಂಗಳೂರು : ರಾಜ್ಯದ ಹಲವೆಡೆ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಮಳೆ ನೀರಿನಲ್ಲಿ ತೋಯ್ದು ಅಪಾರ ಹಾನಿ ಉಂಟಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ವಿಜಯಪುರ, ಕಲಬುರಗಿ, ಮೈಸೂರು, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳು ಸೇರಿ ರಾಜ್ಯದ ವಿವಿಧೆಡೆ ಗುರುವಾರ ಭಾರಿ ಮಳೆ ಬಿದ್ದಿದೆ. ಹೀಗಾಗಿ ಹಲವೆಡೆ ಕಾಫಿ, ಅಡಿಕೆ, ಭತ್ತ, ಬಾಳೆ, ರಾಗಿ, ಸಾಂಬಾರ ಪದಾರ್ಥಗಳು ನೀರು ಪಾಲಾಗಿವೆ. ಅಲ್ಲದೆ, ಇನ್ನು ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.
ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆ:
ಇನ್ನೂ ದಾವಣಗೆರೆ ಜಿಲ್ಲೆಯ ವಿವಿದೆಡೆ ಉತ್ತಮ ಮಳೆಯಾಗಿದ್ದು, ಬುಧವಾರ ರಾತ್ರಿಯಿಂದ ಗುರುವಾರ ಬೆಳೆಗ್ಗೆವರೆಗೆ ಮಳೆಯಾಗಿದ್ದು, ಹರಿಹರ ತಾಲೂಕಿನ ಗುತ್ತೂರು ಭಾಗದಲ್ಲಿ ರಾತ್ರಿಯಿಂದ ಸುರಿದ ಮಳೆಗೆ 250 ಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಿಗೆ ಹಾನಿಯಾಗಿದ್ದು, ಇದರಿಂದ 20 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಮಾರಾಟವಕ್ಕೆ ಸಿದ್ದವಾಗಿದ್ದ ಮೆಕ್ಕೆಜೋಳ ಹಾನಿಯಾಗಿದೆ. ಇನ್ನೂ ಜಿಲ್ಲೆಯ ಚನ್ನಗಿರಿ ನ್ಯಾಮತಿ ತಾಲೂಕಿನಲ್ಲಿ ಸಹ ಉತ್ತಮ ಮಳೆಯಾಗಿದೆ.
ಇನ್ನೂ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬುಧವಾರ ತಡರಾತ್ರಿ ಬಿರುಸಾಗಿ ಮಳೆಯಾಗಿದ್ದು, ಗುರುವಾರ ಬೆಳಗ್ಗೆ ಆರಂಭಗೊಂಡ ಮಳೆ ಮದ್ಯಾಹ್ನ ದವರೆಗೂ ಮುಂದುವರೆದಿದ್ದು, ಹರಪನಹಳ್ಳಿ ತಾಲೂಕಿನಲ್ಲಿ ತುಂತುರು ಮಳೆಯಾಗಿದೆ.