ಅನ್ ಲಾಕ್ 2.0: ಸಂಜೆ 7ರಿಂದ 5 ಗಂಟೆವರೆಗೆ ಕರ್ಫ್ಯೂ; ಯಾವುದಕ್ಕೆಲ್ಲಾ ಅನುಮತಿ? ಯಾವುದಕ್ಕೆ ನಿರ್ಬಂಧ?

ಬೆಂಗಳೂರು: ಪ್ರತೀದಿನ ಸಂಜೆ 7 ಗಂಟೆಯಿಂದ ಬೆಳಗಿನಜಾವ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವಾರಾಂತ್ಯದ ಕರ್ಫ್ಯೂ ಇರಲಿದ್ದು, ಈ ನಿಯಮ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು…

ಬೆಂಗಳೂರು: ಪ್ರತೀದಿನ ಸಂಜೆ 7 ಗಂಟೆಯಿಂದ ಬೆಳಗಿನಜಾವ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವಾರಾಂತ್ಯದ ಕರ್ಫ್ಯೂ ಇರಲಿದ್ದು, ಈ ನಿಯಮ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ತಿಳಿಸಿದ್ದಾರೆ.

ಈ ವೇಳೆ, ಅಂತಾರಾಜ್ಯ ಬಸ್ ಗಳ ಓಡಾಟ ಯಥಾಸ್ಥಿತಿಯಲ್ಲಿರಲಿದ್ದು, ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಮತ್ತು ಮೆಟ್ರೋ ಸಂಚರಿಸಬಹುದು. ಈಗಾಗಲೇ ಆಟೋ, ಟ್ಯಾಕ್ಸಿ, ಕಾರು ಚಾಲನೆಗೆ ಅವಕಾಶವಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಅನ್ ಲಾಕ್ 2.0: ಯಾವುದಕ್ಕೆಲ್ಲಾ ಅನುಮತಿ?

Vijayaprabha Mobile App free

*ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಬಹುದಾಗಿದ್ದು, 50% ಸಾಮರ್ಥ್ಯದೊಂದಿಗೆ ಹೋಟೆಲ್‌, ಕ್ಲಬ್ ತೆರೆಯಬಹುದು.

*ಎಸಿ ಹಾಕುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ

*ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆ ಆಯೋಜಿಸಬಹುದು.

*ಶೇ.50ರಷ್ಟು ಸಾಮರ್ಥ್ಯದೊಂದಿಗೆ ಬಸ್‌ & ಮೆಟ್ರೋ ಸೇವೆ, 50% ಸಾಮರ್ಥ್ಯದೊಂದಿಗೆ ಸರ್ಕಾರಿ/ಖಾಸಗಿ ಕಚೇರಿ ಕಾರ್ಯನಿರ್ವಹಿಸಬಹುದು.

*50% ಸಾಮರ್ಥ್ಯದೊಂದಿಗೆ ಜಿಮ್‌ (ಎಸಿ ಇಲ್ಲದೇ) ತೆರೆಯಬಹುದು

ಅನ್ ಲಾಕ್ 2.0: ಇವುಗಳಿಗಿಲ್ಲ ಅನುಮತಿ

ಇನ್ನು, ರಾಜ್ಯ ಸರ್ಕಾರವು ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ 16 ಜಿಲ್ಲೆಗಳಲ್ಲಿ ಜೂ.21ರಿಂದ ಎರಡನೇ ಹಂತದ ಅನ್ ಲಾಕ್ ಘೋಷಣೆ ಮಾಡಿದ್ದು, ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅನುಮತಿಸಲಾಗಿದೆ.

ಆದರೆ, ಪೂಜಾ ಸ್ಥಳ, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್‌, ಪಬ್‌, ಈಜುಕೊಳ, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳ ಮೇಲಿನ ನಿರ್ಬಂಧ ಮುಂದುವರೆಯಲಿದ್ದು, ಈ ಹಿಂದಿನಂತೆ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.