ಒಳ್ಳೆಯ ಸುದ್ದಿ: ದೇಶದ ಎಲ್ಲ ಜನರಿಗೆ ಕರೋನಾ ಲಸಿಕೆ ಉಚಿತ; ಕೇಂದ್ರ ಸಚಿವರ ಮಹತ್ವದ ಪ್ರಕಟಣೆ

ನವದೆಹಲಿ : ಕರೋನಾ ವೈರಸ್ ಲಸಿಕೆ ಪ್ರಕ್ರಿಯೆಗೆ ಕೇಂದ್ರವು ಡೈ ರನ್ ನಡೆಸುತ್ತಿದ್ದು, ಕೋವಿಡ್ ಲಸಿಕೆಗಳನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ. ವ್ಯಾಕ್ಸಿನೇಷನ್ ಡ್ರೈ ರನ್…

Dr Harsha Vardhan vijayaprabha

ನವದೆಹಲಿ : ಕರೋನಾ ವೈರಸ್ ಲಸಿಕೆ ಪ್ರಕ್ರಿಯೆಗೆ ಕೇಂದ್ರವು ಡೈ ರನ್ ನಡೆಸುತ್ತಿದ್ದು, ಕೋವಿಡ್ ಲಸಿಕೆಗಳನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ.

ವ್ಯಾಕ್ಸಿನೇಷನ್ ಡ್ರೈ ರನ್ ಪರಿಶೀಲಿಸಲು ದೆಹಲಿಯ ಆಸ್ಪತ್ರೆಗೆ ಹೋದ ಸಚಿವ  ಡಾ.ಹರ್ಷ ವರ್ಧನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೋವಿಡ್ ಲಸಿಕೆಗಳನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಅವರ ಮೈತ್ರಿ ಅಧಿಕಾರಕ್ಕೆ ಬಂದರೆ, ಎಲ್ಲ ಬಿಹಾರಿಗಳಿಗೆ ಉಚಿತ ಕರೋನಾ ಲಸಿಕೆ ನೀಡುತ್ತೇವೆ ಎಂಬ ಬಿಜೆಪಿಯ ಹೇಳಿಕೆ ಆ ಸಮಯದಲ್ಲಿ ಚರ್ಚೆಯ ವಿಷಯವಾಗಿತ್ತು. ಇದು ಬಿಹಾರಿಗಳಿಗೆ ಮಾತ್ರ ಉಚಿತವೇ? ಎಂದು ಅನೇಕರು ಪ್ರಶ್ನೆ ಪ್ರಶ್ನಿಸಿದ್ದರು.

Vijayaprabha Mobile App free

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಮತ್ತು ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿದ ಅಸ್ಟ್ರೊಜೆನಿಕಾ ಲಸಿಕೆಗಳು ತುರ್ತು ಬಳಕೆಗಾಗಿ ಕೇಂದ್ರ ಔಷದ ಗುಣಮಟ್ಟ ಸಂಸ್ಥೆ ಇಂದು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.

ಆಕ್ಸ್‌ಫರ್ಡ್ ಲಸಿಕೆಯನ್ನು ಈಗಾಗಲೇ ಪುಣೆಯ ಸೀರಮ್ ಸಂಸ್ಥೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಅರ್ಜೆಂಟೀನಾ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಅನುಮೋದನೆ ನೀಡಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.