ಅಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗೋಸ್ಕರ ಅಂಚೆ ಕಚೇರಿಯಲ್ಲಿ ಅದ್ಭುತವಾದ ಸ್ಕೀಮ್ ಗಳಿವೆ. ಇವೆಲ್ಲವೂ ಸಣ್ಣ ಉಳಿತಾಯ ಯೋಜನೆಗಳಾಗಿವೆ.
ಇವುಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಕೂಡ ಒಂದು. ನೀವು ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು. ಅಲ್ಲದೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಪಿಪಿಎಫ್ ಯೋಜನೆಯಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಬದಲಾಗುತ್ತದೆ. ಕೇಂದ್ರ ಸರ್ಕಾರ ಈ ಬಡ್ಡಿದರಗಳನ್ನು ಪರಿಶೀಲಿಸುತ್ತದೆ.
ಪಿಪಿಎಫ್ ಮುಕ್ತಾಯ ಅವಧಿ 15 ವರ್ಷಗಳು. ಅಂದರೆ ನೀವು 15 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡುತ್ತಾ ಹೋಗಬೇಕು. ನೀವು ಇನ್ನೂ ಮುಕ್ತಾಯ ಅವಧಿಯನ್ನು ವಿಸ್ತರಿಸಬಹುದು. ಮುಕ್ತಾಯ ಅವಧಿಯನ್ನು ಐದು ವರ್ಷಗಳವರೆಗೆ ಹೆಚ್ಚಿಸಬಹುದು. ಪ್ರಸ್ತುತ ಪಿಪಿಎಫ್ ಖಾತೆಯಲ್ಲಿ ಶೇಕಡಾ 7.1 ರಷ್ಟು ಬಡ್ಡಿ ಸಿಗುತ್ತದೆ.
ನೀವು ದಿನಕ್ಕೆ ರೂ .150 ಉಳಿಸಿ, ತಿಂಗಳ ಕೊನೆಯಲ್ಲಿ ರೂ 4,500 ಅನ್ನು ಪಿಪಿಎಫ್ ಖಾತೆಯಲ್ಲಿ ಠೇವಣಿ ಇಡಬೇಕು. ಅಂದರೆ ನೀವು ವರ್ಷಕ್ಕೆ 54,000 ರೂ ಹೂಡಿಕೆ ಮಾಡಿದಂತಾಗುತ್ತದೆ. ನೀವು 20 ವರ್ಷಗಳ ಕಾಲ ಈ ರೀತಿ ಹೂಡಿಕೆ ಮಾಡಬೇಕು. ಅಂದರೆ 10.8 ಲಕ್ಷ ರೂ. ಹೂಡಿಕೆ ಮಾಡಿತಂತೆ ಆಗುತ್ತದೆ. ಅಂದರೆ, ನಿಮಗೆ 24 ಲಕ್ಷ ರೂ. ಸಿಗುತ್ತದೆ. ನೀವು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ ಹೂಡಿಕೆ ಮಾಡಬಹುದು.