BIG BREAKING: ಲಾರಿ-ಬಸ್ ಡಿಕ್ಕಿಯಾಗಿ ಭೀಕರ ಅಪಘಾತ; 14 ಮಂದಿ ಸಾವು, ಕೆಲವರ ಸ್ಥಿತಿ ಗಂಭೀರ

ಕರ್ನೂಲ್ : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ಥಿ ವ್ಯಾಪ್ತಿಯ ಮಾದಾಪುರ ಸಮೀಪ ಇಂದು ಭೀಕರ ಅಪಘಾತ ಸಂಭವಿಸಿದ್ದು, 14 ಮಂದಿ ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಕರ್ನೂಲ್ ಜಿಲ್ಲೆಯ ಮಾದಾಪುರ ಸಮೀಪದಲ್ಲಿ ಲಾರಿ…

Road accident vijayaprabha

ಕರ್ನೂಲ್ : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ಥಿ ವ್ಯಾಪ್ತಿಯ ಮಾದಾಪುರ ಸಮೀಪ ಇಂದು ಭೀಕರ ಅಪಘಾತ ಸಂಭವಿಸಿದ್ದು, 14 ಮಂದಿ ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಕರ್ನೂಲ್ ಜಿಲ್ಲೆಯ ಮಾದಾಪುರ ಸಮೀಪದಲ್ಲಿ ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿಯಾಗಿ ಈ ಅಪಘಾತ ಉಂಟಾಗಿದೆ ಎನ್ನಲಾಗಿದೆ. ಈ ಭೀಕರ ಅಪಘಾತದಲ್ಲಿ ಒಂದು ಮಗು, 8 ಮಹಿಳೆಯರು ಸೇರಿ 14 ಜನ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಈ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಹೆಚ್ಚುವರಿ ಮಾಹಿತಿ ಇನ್ನಷ್ಟೇ ಬರಬೇಕಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.