ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು, ಗುರುವಾರ ಬೆಳಗ್ಗೆ 8.30 ರವರೆಗೆ ಹಲವು ಭಾಗದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ, ಕೊಪ್ಪಳ, ರಾಯಚೂರು, & ಯಾದಗಿರಿ ಜಿಲ್ಲೆಯಲ್ಲಿ 6.5 ಸೆ.ಮೀ. ಯಿಂದ 11.5 ಸೆ.ಮೀ. ವರೆಗೆ ಇಂದು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ.
ಇಂದು ಕರಾವಳಿ, ಉತ್ತರ ಕನ್ನಡ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಬೀದರ್, ಧಾರವಾಡ,ಗದಗ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಿತ್ರದುರ್ಗ, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 26-20, ಮಂಗಳೂರು: 29-24, ಶಿವಮೊಗ್ಗ: 28-21, ಬೆಳಗಾವಿ: 27-21, ಮೈಸೂರು: 27-21, ಮಂಡ್ಯ: 28-21, ಮಡಿಕೇರಿ: 23-17, ರಾಮನಗರ: 27-21, ಹಾಸನ: 26-19, ಚಾಮರಾಜನಗರ: 27-21, ಚಿಕ್ಕಬಳ್ಳಾಪುರ: 27-19, ಕೋಲಾರ: 27-20, ತುಮಕೂರು: 27-21, ಉಡುಪಿ: 29-24, ಕಾರವಾರ: 29-24, ಚಿಕ್ಕಮಗಳೂರು: 25-19, ದಾವಣಗೆರೆ: 28-21 ಡಿಗ್ರಿ ಸೆಲ್ಸಿಯಸ್ ಇರಲಿದೆ.