ಇಂದು ಬೆಂಗಳೂರು ಮತ್ತು ಮುಂಬೈ ನಡುವೆ ಸೆಣಸಾಟ: ಅಗ್ರಸ್ಥಾನಕ್ಕೆ ಪೈಪೋಟಿ!

ಅಬುದಾಬಿ: ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಅಬುದಾಬಿಯ ಜಾಯೆದ್ ಸ್ಟೇಡಿಯಂ ನಲ್ಲಿ ಸೆಣಸಲಿದೆ. ಉಭಯ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ…

rcb vs mi match vijayaprabha news

ಅಬುದಾಬಿ: ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಅಬುದಾಬಿಯ ಜಾಯೆದ್ ಸ್ಟೇಡಿಯಂ ನಲ್ಲಿ ಸೆಣಸಲಿದೆ.

ಉಭಯ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 16 ಪಂದ್ಯಗಳಲ್ಲಿ ಮುಂಬೈ ಜಯಭೇರಿ ಬಾರಿಸಿದ್ದರೆ, ಬೆಂಗಳೂರು ಕೇವಲ 10 ಪಂದ್ಯದಲ್ಲಿ ಜಯಿಸಿದೆ. ಅಗ್ರ ಸ್ಥಾನದಲ್ಲಿ ಮುಂದುವರೆಯಲು ಮುಂಬೈ ಹೋರಾಟ ನಡೆಸುತ್ತಿದ್ದರೆ, ಅದೇ ಸ್ಥಾನವನ್ನು ಕಿತ್ತುಕೊಳ್ಳಲು ಬೆಂಗಳೂರು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಹಾಗಾಗಿ ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ.

ತಂಡದ ಸಂಭಾವ್ಯ ಪಟ್ಟಿ:

Vijayaprabha Mobile App free

ರಾಯಲ್ ಚಾಲೆಂಜರ್ಸ್ ಬೆಂಗಳೂರು : ದೇವದತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ಕೀಪರ್), ಮೊಯೀನ್ ಅಲಿ, ಗುರ್ಕೀರತ್ ಸಿಂಗ್ ಮನ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಶಹಬಾಜ್ ಅಹ್ಮದ್, ನೇಗಿ, ಉಮೇಶ್ ಯಾದವ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ಆಡಮ್ ಜಂಪಾ, ಪಾರ್ಥಿವ್ ಪಟೇಲ್, ಡೇಲ್ ಸ್ಟೇನ್, ಶಿವಮ್ ದುಬೆ, ಇಸುರು ಉದಾನ

ಮುಂಬೈ ಇಂಡಿಯನ್ಸ್ : ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್ (ಕೀಪರ್), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ನಾಯಕ), ಕ್ರುನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ನಾಥನ್ ಕೋಲ್ಟರ್-ನೈಲ್, ರೋಹಿತ್ ಶರ್ಮಾ, ಧವಲ್ ಕುಲಕರ್ಣಿ, ಆದಿತ್ಯ ತಾರೆ, ಮಿಚೆಲ್ ಮೆಕ್ಲೆನಾಗನ್, ಕ್ರಿಸ್ ಲಿನ್, ಜಯಂತ್ ಯಾದವ್, ಅಂಮೋಲ್ಪ್ರೀತ್ ಸಿಂಗ್, ಅನುಕುಲ್ ರಾಯ್, ಮೊಹ್ಸಿನ್ ಖಾನ್, ಶೆರ್ಫೇನ್ ರುದರ್ಫೋರ್ಡ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರೈ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.