ಬೆಂಗಳೂರು : ಇಂದು ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ, ಆಟೋರಾಜ, ಕರಾಟೆ ಕಿಂಗ್, ದಿವಂಗತ ಶಂಕರ್ ನಾಗ್ ರವರ ಪುಣ್ಯಸ್ಮರಣೆ. ಶಂಕರ್ ನಾಗ್ ಅವರು ಕನ್ನಡ ಚಿತ್ರ ರಂಗದ ದಿಗ್ಗಜ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ, ನಿರ್ಮಾಪಕರೂ ಕೂಡ ಆಗಿದ್ದವರು. ಕರಾಟೆ ಕಿಂಗ್ ಶಂಕರ್ ನಾಗ್ ರವರ ಅಭಿನಯಕ್ಕೆ ಇಂದಿಗೂ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಏಳಿಗೆಯ ಬಗ್ಗೆ ದೂರಾಲೋಚನೆಯನ್ನು ಹೊಂದ್ದಿದ್ದರು.
ಶಂಕರ್ ನಾಗ್ ಅವರು ಬದುಕಿದ್ದು ಕೇವಲ 36 ವರ್ಷವಾದರೂ ಅವರ ಸಾಧನೆ ಮಾತ್ರ ಅಪಾರ ಇಂದುಗೂ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿದೆ. ಶಂಕರ್ ನಾಗ್ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಅಂದಿನ ಕಾಲದಲ್ಲೇ ನಂದಿ ಬೆಟ್ಟಕ್ಕೆ ರೋಪ್ ವೇ, ಫಿಲ್ಮ್ ಸಿಟಿ, ಬೆಂಗಳೂರಿಗೆ ಮೆಟ್ರೋ ರೈಲು ನಿರ್ಮಾಣದ ಬಗ್ಗೆ ಬ್ಲೂ ಪ್ರಿಂಟ್ ರೆಡಿ ಮಾಡಿದ್ದರು.
ಶಂಕರ್ ನಾಗ್ ರವರು ಒಂದಾನೊಂದು ಕಾಲದಲ್ಲಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾಕ್ಕೆ ಶಂಕರ್ ನಾಗ್ ರವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಶಂಕರ್ ನಾಗ್ ಅವರು 12 ವರ್ಷಗಳಲ್ಲಿ ಮಾಲ್ಗುಡಿ ಡೇಸ್, ಆಟೋರಾಜ, ಸೇರಿದಂತೆ ಕನ್ನಡದ ಸುಮಾರು 90ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಶಂಕರ್ ನಾಗ್ ಅಭಿನಯ, ಮತ್ತು ನಿರ್ದೇಶನದ ಮೂಲಕ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.
ಕರಾಟೆ ಕಿಂಗ್ ಶಂಕರ್ ನಾಗ್ ರವರ ಪುಣ್ಯಸ್ಮರಣೆಯಾದ ಇಂದು ಅರೋಗ್ಯ ಸಚಿವ ಶ್ರೀರಾಮುಲು, ಕೃಷಿ ಸಚಿವ ಬಿ.ಸಿ.ಪಾಟೀಲ್, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಸೇರಿದಂತೆ, ಚಿತ್ರರಂಗದ ಅನೇಕ ಗಣ್ಯರು ದಿವಂಗತ ಶಂಕರ್ ನಾಗ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
ಇದನ್ನು ಓದಿ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಿಂದು ಮರುಹುಟ್ಟು ಸಿಕ್ಕ ದಿನ…!