ಬೆಂಗಳೂರು: ಇಂದು ಹೆಮ್ಮೆಯ ಕನ್ನಡಿಗ, ಕ್ರಿಕೆಟಿಗ ಗುಂಡಪ್ಪ ರಂಗನಾಥ್ ವಿಶ್ವನಾಥ್ ಅವರ ಜನ್ಮದಿನ. ಶಿವಮೊಗ್ಗದ ಭದ್ರಾವತಿಯಲ್ಲಿ ಹುಟ್ಟಿದ ಗುಂಡಪ್ಪ ರಂಗನಾಥ್ ವಿಶ್ವನಾಥ್ ಅವರು ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದವರು.
ಇವರು ಮಧ್ಯಮ ಕ್ರಮಾಂಕದ ಕಲಾತ್ಮಕ ಬಲಗೈ ಬ್ಯಾಟ್ಸ್ ಮ್ಯಾನ್ ಆಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿಯ ಭಾರತದ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ತಂಡದ ಮುಖ್ಯಸ್ಥರಾಗಿದ್ದರು. ಇವರು ‘ವಿಶಿ’ ಎಂದೇ ಚಿರಪರಿಚಿತ. 15 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 91 ಪಂದ್ಯ ಆಡಿರುವ ಇವರು 13 ಶತಕಗಳನ್ನು ಸಿಡಿಸಿದ್ದಾರೆ. ಇವರು ಶತಕ ಸಿಡಿಸಿದ್ದ ಒಂದೂ ಪಂದ್ಯದಲ್ಲೂ ಭಾರತ ಸೋತಿಲ್ಲ ಎಂಬುದು ವಿಶೇಷ.
ವಿಶಿ ಜನ್ಮದಿನ; ಶುಭಕೋರಿದ ಸಿಎಂ:
ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದ ಗುಂಡಪ್ಪ ರಂಗನಾಥ್ ವಿಶ್ವನಾಥ್ (ವಿಶಿ) ಅವರ ಜನ್ಮದಿನವಾದ ಇಂದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ‘ಅಪ್ರತಿಮ ಕ್ರಿಕೆಟಿಗ, ಮಾದರಿ ಆಟಗಾರ, ಸ್ಪೋಟಕ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಒಬ್ಬರಾದ ಶ್ರೀ ಗುಂಡಪ್ಪ ವಿಶ್ವನಾಥ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರಿಗೆ ಭಗವಂತ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ’ ಶುಭಾಶಯ ತಿಳಿಸಿದ್ದಾರೆ.
Warm birthday wishes to Shri Gundappa Vishwanath, iconic cricketer and one of the most elegant batsmen to have ever graced the game. My best wishes for his good health and long life. pic.twitter.com/0YT4GncbKa
— B.S. Yediyurappa (@BSYBJP) February 12, 2021