ಅಹಮದಾಬಾದ್: ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಜಯಿಸಿದ ತಂಡಕ್ಕೆ ಸರಣಿ ಕಿರೀಟ ಒಲಿಯಲಿದೆ.
ಈಗಾಗಲೇ ಉಭಯ ತಂಡಗಳು 2-2ರಿಂದ ಸಮಬಲ ಸಾಧಿಸಿದ್ದು, ಈ ಪಂದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇನ್ನು, ಕನ್ನಡಿಗ ಕೆಎಲ್ ರಾಹುಲ್ ಮತ್ತೊಂದು ಅವಕಾಶವನ್ನು ಎದುರು ನೋಡುತ್ತಿದ್ದು, ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಸುಂದರ್ ಬದಲಿಗೆ ರಾಹುಲ್ ತೇವಾಟಿಯಾ, ಶಾರ್ದೂಲ್ ಬದಲಿಗೆ ಟಿ.ನಟರಾಜನ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಸ್ಥಳ: ಅಹಮದಾಬಾದ್, ಸಮಯ: ಸಂಜೆ: 7ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
ಉಭಯ ತಂಡಗಳ ಸಂಭಾವ್ಯ ಪಟ್ಟಿ:
ಭಾರತ ತಂಡ: ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ರಾಹುಲ್ ಚಹರ್, ಯುಜ್ವೇಂದ್ರ ಚಹಲ್, ಇಶಾನ್ ಕಿಶನ್ , ಶಿಖರ್ ಧವನ್, ದೀಪಕ್ ಚಹರ್, ರಾಹುಲ್ ತಿವಾಟಿಯಾ, ನವದೀಪ್ ಸೈನಿ, ಟಿ ನಟರಾಜನ್
ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಇಯೊನ್ ಮೋರ್ಗಾನ್ (ನಾಯಕ), ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ಟಾಮ್ ಕುರ್ರನ್, ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್ , ರೀಸ್ ಟೋಪ್ಲಿ, ಲಿಯಾಮ್ ಲಿವಿಂಗ್ಸ್ಟೋನ್