ಇಂದು ವರ್ಷದ ಕೊನೆಯ ಸೂರ್ಯಗ್ರಹಣ; ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ..!

ಇಂದು ವರ್ಷದ 2ನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದ್ದು, ಐಸ್ಲ್ಯಾಂಡ್‌ನಿಂದ ಮಧ್ಯಾಹ್ನ 2:29ಕ್ಕೆ ಪ್ರಾರಂಭವಾಗಿ ಅರಬ್ಬಿ ಸಮುದ್ರದಲ್ಲಿ ಸಂಜೆ 6.20ಕ್ಕೆ ಕೊನೆಗೊಳ್ಳುತ್ತದೆ. ಹೌದು, ಭಾರತದಲ್ಲಿ ಈ ಗ್ರಹಣವು ಸುಮಾರು 4:29 ರಿಂದ ಪ್ರಾರಂಭವಾಗಿ ಸಂಜೆ…

solar eclipse

ಇಂದು ವರ್ಷದ 2ನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದ್ದು, ಐಸ್ಲ್ಯಾಂಡ್‌ನಿಂದ ಮಧ್ಯಾಹ್ನ 2:29ಕ್ಕೆ ಪ್ರಾರಂಭವಾಗಿ ಅರಬ್ಬಿ ಸಮುದ್ರದಲ್ಲಿ ಸಂಜೆ 6.20ಕ್ಕೆ ಕೊನೆಗೊಳ್ಳುತ್ತದೆ.

ಹೌದು, ಭಾರತದಲ್ಲಿ ಈ ಗ್ರಹಣವು ಸುಮಾರು 4:29 ರಿಂದ ಪ್ರಾರಂಭವಾಗಿ ಸಂಜೆ 6.09 ರವರೆಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣ ಸಂಭವಿಸಲಿದ್ದು, ಭಾರತದ ಕೆಲವು ಭಾಗಗಳಲ್ಲಿ ಇಂದು ಗ್ರಹಣ ಗೋಚರವಾಗಲಿದೆ.

ಸೂರ್ಯಗ್ರಹಣ: ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ

Vijayaprabha Mobile App free

ಇನ್ನು, ಅಶ್ವಯುಜ ಅಮಾವಾಸ್ಯೆಯಂದು ಇಂದು ಸೂರ್ಯಗ್ರಹಣ ಸಂಭವಿಸಲಿದ್ದು ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ (44 ನಿಮಿಷ) ಗ್ರಹಣ ಗೋಚರಿಸಲಿದೆ.

ಗ್ರಹಣ ಪರ್ವಕಾಲದಲ್ಲಿ, ಅಂದರೆ ಸ್ಪರ್ಶದಿಂದ ಸೂರ್ಯಾಸ್ತದವರೆಗಿನ ಕಾಲಾವಧಿಯಲ್ಲಿ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಮಾಡುವುದು ಮತ್ತು ನಿದ್ದೆ ಮಾಡುವುದನ್ನು ನಿಲ್ಲಿಸಬೇಕು.

ಅಷ್ಟೇ ಅಲ್ಲ, ಮಧ್ಯಾಹ್ನ 12 ಗಂಟೆಯ ಒಳಗೆ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ ಹಾಗು ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.