ಗಮನಿಸಿ: ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ಇಂದೇ ಕೊನೆ ದಿನ: ತಪ್ಪಿದ್ರೆ 5000ರೂ ಬಾರಿ ದಂಡ!

2021-22ರ ವರ್ಷದ ಆದಾಯಕ್ಕೆ ಐಟಿ ರಿಟರ್ನ್ಸ್‌ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಆದಾಯ ತೆರಿಗೆ ವಿವರಗಳನ್ನು ಫೈಲ್‌ ಮಾಡಲು…

tax return vijayaprabha news

2021-22ರ ವರ್ಷದ ಆದಾಯಕ್ಕೆ ಐಟಿ ರಿಟರ್ನ್ಸ್‌ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಗಡುವು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಆದಾಯ ತೆರಿಗೆ ವಿವರಗಳನ್ನು ಫೈಲ್‌ ಮಾಡಲು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕನಿಷ್ಠ 1 ಕೋಟಿ ರಿಟರ್ನ್ಸ್ ಸಲ್ಲಿಸುವ ನಿರೀಕ್ಷೆಯಿದ್ದು, ಕಳೆದ ವರ್ಷ, ನಿಗದಿತ ಕೊನೆಯ ದಿನಾಂಕದಂದು ಸರ್ಕಾರವು 50 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್‌ಗಳನ್ನು ಸ್ವೀಕರಿಸಿತ್ತು. ಜುಲೈ 31ರ ಬಳಿಕ ಆದಾಯ ತೆರಿಗೆ ಪಾವತಿಸಲು ದಂಡ ಕಟ್ಟಬೇಕಾಗುತ್ತದೆ.

ಒಂದು ವೇಳೆ ನೀವು ಜುಲೈ 31ರ ಒಳಗೆ ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ಸಾಧ್ಯವಾಗದಿದ್ದರೆ ನೀವು ಲೇಟ್‌ ಫೀಜು ಕಟ್ಟಬೇಕಾಗಬಹುದಾಗಿದ್ದು, ಇದು ನಿಮ್ಮ ಮೇಲೆ ಹಣಕಾಸಿನ ಪರಿಣಾಮಗಳನ್ನು ಉಂಟುಮಾಡಬಹುದು.

Vijayaprabha Mobile App free

ಇಂದೇ ಕೊನೆ ದಿನ, ತಪ್ಪಿದ್ರೆ ₹ 5000 ದಂಡ

2021-22ರ ವರ್ಷದ ಆದಾಯಕ್ಕೆ ಐಟಿ ರಿಟರ್ನ್ಸ್‌ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, IT ಫೈಲ್‌ ಮಾಡಲು ಗಡುವು ವಿಸ್ತರಣೆಯಿಲ್ಲವೆಂದು IT ಇಲಾಖೆ ಹೇಳಿದೆ. ಡಿಸೆಂಬರ್‌ 31ರವರೆಗೂ ITR ದಾಖಲಿಸಲು ಅವಕಾಶವಿದ್ದರೂ, ತೆರಿಗೆ ವಿನಾಯಿತಿ ಲಾಭ ತಪ್ಪಿಸಿಕೊಳ್ಳುವ ಜೊತೆಗೆ ದಂಡ ಕಟ್ಟಬೇಕಿದೆ.

ಪಾವತಿಸದ ತೆರಿಗೆಗೆ 2% ಬಡ್ಡಿ ಆಗಸ್ಟ್‌ನಿಂದ ಅನ್ವಯವಾಗಲಿದೆ. ತಡವಾಗಿ ITR ಸಲ್ಲಿಕೆಯಾದರೆ, ರೂ.5 ಲಕ್ಷದೊಳಗೆ ವಾರ್ಷಿಕ ಆದಾಯವಿದ್ದರೆ ರೂ.1 ಸಾವಿರ ಲೇಟ್‌ ಫೀಜು, ರೂ.5 ಲಕ್ಷಕ್ಕಿಂತ ಮೇಲೆ ಆದಾಯವಿದ್ದರೆ 5 ಸಾವಿರ ರೂಪಾಯಿ ಲೇಟ್‌ ಫೀಜು ದಂಡ ವಿಧಿಸಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.