ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿ ರೈತರು ಇ-ಕೆವೈಸಿ ಮಾಡಿಸಲು ಇಂದೇ (ಆಗಸ್ಟ್ 31) ಕೊನೆಯ ದಿನವಾಗಿದೆ. ಈ ಯೋಜನೆಯಡಿ ನೋಂದಾಯಿಸಿರುವ ರೈತರು ಇ-ಕೆವೈಸಿ ಮಾಡಿಸುವುದು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಒಂದು ವೇಳೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ರೈತರು ಇ-ಕೆವೈಸಿ ಮಾಡಿಸದಿದ್ದರೆ, ಅಂತಹ ರೈತರಿಗೆ ಕೇಂದ್ರ ಸರ್ಕಾರ ನೀಡುವ 2000ರೂ ಸಹಾಯಧನ ಕಡಿತವಾಗಲಿದೆ.
ಆದ್ದರಿಂದ, ಯಾವ ರೈತರು ಇನ್ನೂ ಕೆವೈಸಿ ಅಪ್‌ಡೇಟ್ ಮಾಡಿಲ್ಲವೋ ಅಂತವರು ಇಂದೇ ಮಾಡಿಸಿಕೊಳ್ಳಿ. ಈ ಯೋಜನೆಯಡಿ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2000 ರೂ.ಗಳಂತೆ ಮೂರು ತಿಂಗಳ ಕಂತುಗಳಲ್ಲಿ ವರ್ಷಕ್ಕೆ 6000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗುತ್ತದೆ. ಈ ಯೋಜನೆ ಎಲ್ಲಾ ರೈತ ಕುಟುಂಬಗಳಿಗೆ ಆದಾಯ ಬೆಂಬಲ ಒದಗಿಸುವ ಗುರಿ ಹೊಂದಿದೆ.
ಇದಕ್ಕಾಗಿ, ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್‌ಗೆ ಒಟಿಪಿ ಪಡೆದು ಅಥವಾ ಹತ್ತಿರದ ಸಾಮಾನ್ಯ ಗ್ರಾಮ ಒನ್, ಸೇವಾ ಕೇಂದ್ರಗಳಿಗೆ ತೆರಳಿ, ಬಯೋಮೆಟ್ರಿಕ್ ಮೂಲಕವೂ ಇ-ಕೆವೈಸಿ ಮಾಡಿಸಬಹುದು.