ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವ ದಿನ. ನವೆಂಬರ್ 1 ರಂದು ಕನ್ನಡ ನಾಡು ಮರುಹುಟ್ಟಿದ ದಿನವಾದ ಇಂದು ಸಮಸ್ತ ನಾಡಿನ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಯಾವುದೇ ಬೇಧವಿಲ್ಲದೇ ಒಟ್ಟುಗೂಡಿ ಕನ್ನಡ ರಾಜ್ಯೋತ್ಸವ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿ ಇರುವ ಕನ್ನಡಿಗರು ಸಹ ಆಯಾ ಪ್ರದೇಶಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ದಿನವವನ್ನು ಆಚರಿಸುತ್ತಾರೆ
ಕರ್ನಾಟಕದ ಇತಿಹಾಸ:
ಈ ವರ್ಷ ನಾವು 65ನೇ ಕನ್ನಡ ರಾಜ್ಯೋತ್ಸದ ಸಂಭ್ರಮದಲ್ಲಿದ್ದೇವೆ.ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೆ 1905ರಲ್ಲಿ ಪ್ರಾರಂಭಿಸಿದರು.
1956ರ ನ. 1ರಂದು ರಾಜ್ಯಗಳನ್ನು ವಿಂಗಡಿಸಿದರು. ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶ ವಿಲೀನಗೊಂಡು ಮೈಸೂರು ಉದಯವಾಯಿತು. ಮೈಸೂರು ರಾಜ್ಯಗಳನ್ನು 3 ವಿಭಾಗಗಳಾಗಿ ಉತ್ತರಕರ್ನಾಟಕ, ಹಳೆಯ ಮೈಸೂರು, ಮಲೆನಾಡು ಎಂದು ವಿಂಗಡಿಸಲಾಯಿತು.
ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಆನಂದ್ ಸಿಂಗ್, ಸಿ ಟಿ ರವಿ, ಶ್ರೀರಾಮುಲು, ಪ್ರಹ್ಲಾದ್ ಜೋಶಿ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಗಣ್ಯರು ಶುಭ ಕೋರಿದ್ದಾರೆ.