ನಾರ್ಥಾಂಪ್ಟನ್: ಈಗಾಗಲೇ 2-1 ರಿಂದ ಏಕದಿನ ಸರಣಿ ಸೋತಿರಿವ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಟಿ 20 ಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಸಜ್ಜಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಟಿ 20 ಪಂದ್ಯ ಇಂದು ನಡೆಯಲಿದ್ದು, ಏಕದಿನ ಫಾರ್ಮೆಟ್ ಹಾಗೆ, ಈ ಫಾರ್ಮೆಟ್ ನಲ್ಲೂ ಕೂಡ ಎದುರಾಳಿ ತಂಡವು ನಮಗಿಂತ ಬಲಶಾಲಿಯಾಗಿರುವುದರಿಂದ ಹರ್ಮನ್‌ಪ್ರೀತ್ ಕೌರ್ ಅವರ ತಂಡವು ಗೆಲುವಿಗಾಗಿ ಶ್ರಮಿಸಬೇಕಾಗುತ್ತದೆ.
ಫಾರ್ಮ್‌ನಿಲ್ಲಿಲ್ಲದ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ತೀವ್ರ ಒತ್ತಡದಲ್ಲಿದ್ದು, ಭಾರತದ ಯಶಸ್ಸಿನ ಸಾಧ್ಯತೆಗಳು ಆರಂಭಿಕರಾದ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರ ಮೇಲೆ ಅವಲಂಬಿತವಾಗಿದೆ. ಆಲ್ರೌಂಡರ್ ಗಳಾದ ಸ್ನೇಹ ರಾಣಾ, ರಿಚಾ ಘೋಷ್ ಜೊತೆಗೆ ಹಿರಿಯ ಆಲ್‌ರೌಂಡರ್ ದೀಪ್ತಿ ಶರ್ಮಾ ಕೂಡ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಮತ್ತೊಂದೆಡೆ, ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಡ್ಯಾನಿ ವ್ಯಾಟ್ ತಂಡಕ್ಕೆ ವಾಪಾಸ್ ಆಗಿದ್ದು, ಇಂಗ್ಲೆಂಡ್ ಇನ್ನಷ್ಟು ಬಲಶಾಲಿಯಾಗಿದೆ.
ತಂಡಗಳ ಸಂಭಾವ್ಯ ಪಟ್ಟಿ:
ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ, ಪೂನಂ ಯಾದವ್, ರಾಧಾ ಯಾದವ್, ಏಕ್ತಾ ಬಿಶ್ತ್, ಪೂಜಾ ವಸ್ತ್ರಕಾರ್, ಹರ್ಲಿನ್ ಡಿಯೋಲ್, ಅರುಂಧತಿ ರೆಡ್ಡಿ, ರಿಚಾ ಘೋಷ್, ಸಿಮ್ರಾನ್ ಬಹದ್ದೂರ್, ಇಂದ್ರಾಣಿ ರಾಯ್
ಇಂಗ್ಲೆಂಡ್ ಮಹಿಳಾ ತಂಡ: ಟಾಮಿ ಬ್ಯೂಮಾಂಟ್, ಹೀಟರ್ ನೈಟ್ (ನಾಯಕಿ), ನಟಾಲಿಯಾ ಸ್ಕಿವರ್, ಆಮಿ ಎಲ್ಲೆನ್ ಜೋನ್ಸ್ (ವಿಕೆಟ್ ಕೀಪರ್), ಅನ್ಯಾ ಶ್ರಬ್ಸೋಲ್, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಸಾರಾ ಗ್ಲೆನ್, ಡೇನಿಯಲ್ ವ್ಯಾಟ್, ನತಾಶಾ ಫಾರಂಟ್, ಸೋಫಿಯಾ ಡಂಕ್ಲೆ, ಫ್ರಾನ್ ವಿಲ್ಸನ್, ಫ್ರೇಯಾ ಡೇವಿಸ್, ಮ್ಯಾಡಿ ವಿಲಿಯರ್ಸ್.