ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ; ರಿಂಗ್ ಆಫ್ ಫೈರ್ ಎಂದರೇನು? ಎಲ್ಲೆಲ್ಲಿ ಕಾಣಿಸಲಿದೆ? ಏನು ಮಾಡಬಾರದದು? ಏನು ಮಾಡಬೇಕು?

2021 ರ ಈ ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು, ಇದು ಸೂರ್ಯಾಸ್ತದ ಕೆಲವೇ ನಿಮಿಷಗಳ ಮೊದಲು ಭಾರತದ ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಕಂಡುಬರುತ್ತದೆ.

ಈ ಎರಡು ಸ್ಥಳಗಳನ್ನು ಹೊರತುಪಡಿಸಿ ಭಾರತದಲ್ಲಿ ಈ ಸೂರ್ಯಗ್ರಹಣವನ್ನು ನೋಡಲು ಸಾಧ್ಯವಿಲ್ಲ. ಚಂದ್ರ, ಸೂರ್ಯ ಮತ್ತು ಭೂಮಿಯು ಒಂದೇ ನೇರ ರೇಖೆಯಲ್ಲಿ ಬಂದು ಗೃಹಣ ಸಂಭವಿಸುತ್ತದೆ. ಅಮಾವಾಸ್ಯೆಯ ದಿನದಂದು ಸೂರ್ಯ ಮತ್ತು ಚಂದ್ರನ ನಡುವೆ ಚಂದ್ರ ಗ್ರಹಣ ಸಂಭವಿಸುತ್ತದೆ. ಇಂದು ಸೂರ್ಯಗ್ರಹಣ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1:42ಕ್ಕೆ ಆರಂಭಗೊಂಡು 6:41ಕ್ಕೆ ಕೊನೆಗೊಳ್ಳಲಿದೆ.

ರಿಂಗ್ ಆಫ್ ಫೈರ್ ಎಂದರೇನು?

Advertisement

ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಬಹು ದೂರದಲ್ಲಿದ್ದಾಗ ಸೂರ್ಯನಿಗೆ ಅಡ್ಡ ಬರುವ ಪರಿಣಾಮ ಅದು ಉಂಗುರ ತೊಡಿಸಿದ ರೀತಿಯಲ್ಲಿ ಕಾಣಿಸಲಿದ್ದು, ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ.

ಚಂದ್ರನು ದೂರದಲ್ಲಿರುವ ಕಾರಣ ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳುವುದಲ್ಲದೆ, ಸೂರ್ಯನ ಬೆಳಕು ಭೂಮಿಗೆ ಬರುವುದನ್ನು ಸಂಪೂರ್ಣವಾಗಿ ತಡೆಯಲಾಗದೆ ಮಧ್ಯಭಾಗವನ್ನಷ್ಟೇ ಆಕ್ರಮಿಸುತ್ತಾನೆ.

ನಾಳೆ ಎಲ್ಲೆಲ್ಲಿ ಕಾಣಿಸಲಿದೆ ಸೂರ್ಯಗ್ರಹಣ?

ಈ ವರ್ಷದ ಮೊದಲ ಸೂರ್ಯಗ್ರಹಣ ಕೆನಡಾ, ಗ್ರೀನ್ಲ್ಯಾಂಡ್ ಮತ್ತು ರಷ್ಯಾದಲ್ಲಿ ಗೋಚರವಾಗಲಿದ್ದು, ಸೈಬೀರಿಯಾ ಮತ್ತು ಉತ್ತರ ಧ್ರುವದಲ್ಲಿಯೂ ಗ್ರಹಣ ಕಾಣಿಸಲಿದೆ.

ಇನ್ನು, ಪೂರ್ವ ಕರಾವಳಿ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಭಾಗಶಃ ಗೋಚರಿಸಲಿದ್ದು, ಭಾರತ, ಅಮೆರಿಕದಲ್ಲಿ ಗ್ರಹಣ ಕಾಣಿಸುವುದಿಲ್ಲ. ಈ ವರ್ಷದ ಇನ್ನೊಂದು ಸೂರ್ಯಗ್ರಹಣ ಈ ವರ್ಷದ ಅಂತ್ಯಕ್ಕೆ ಗೋಚರಿಸಲಿದ್ದು, ಇದು ಕೂಡ ಭಾರತಕ್ಕೆ ಗೋಚರಿಸುವುದಿಲ್ಲ ಎನ್ನಲಾಗುತ್ತಿದೆ.

ಸೂರ್ಯಗ್ರಹಣ 2021: ಏನು ಮಾಡಬಾರದು?

ಸೂರ್ಯ ಗ್ರಹಣದ ಸಮಯದಲ್ಲಿ ಯಾವುದೇ ದೇವರ ಪೂಜೆಯಂತಹ ಪವಿತ್ರ ಕಾರ್ಯ ಮಾಡಬಾರದು. ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು. ಇದರಿಂದ ಕಣ್ಣಿಗೆ ಹಾನಿಯಾಗಬಹುದು.

ಇನ್ನು, ಖಗೋಳ ಪ್ರೇಮಿಗಳು ಬೈನಾಕ್ಯೂಲರ್, ಟೆಲಿಸ್ಕೋಪ್ ಅಥವಾ ಒಪ್ಟಿಕಲ್ ಕ್ಯಾಮರಾ ದಿಂದ ಗ್ರಹಣವನ್ನು ವೀಕ್ಷಿಸಬಹುದಾಗಿದ್ದು, ಸಾಮಾನ್ಯ ಬೈನಾಕ್ಯೂಲರ್ ಅಥವಾ ಟೆಲಿಸ್ಕೋಪ್ ಬಳಸಬೇಡಿ. ಗರ್ಭಿಣಿಯರು ಮನೆಯಿಂದ ಹೊರೆಗೆ ಬರಬಾರದು. ಗ್ರಹಣ ವೇಳೆ ಆಹಾರ ಸೇವಿಸಬಾರದು.

ಸೂರ್ಯಗ್ರಹಣ 2021: ಮಾಡಬೇಕಾದ ಕೆಲಸಗಳು

ಜನರು ಹೆಚ್ಚಾಗಿ ಗ್ರಹಣ ಸಂದರ್ಭದಲ್ಲಿ ಮನೆಯೊಳಗೆ ಇರುವುದು ಸೂಕ್ತವಾಗಿದ್ದು, ಯಾವುದೇ ಆಹಾರವನ್ನು ಈ ಸಮಯದಲ್ಲಿ ಸೇವಿಸಬಾರದು. ಇನ್ನು, ಆಹಾರ ಮತ್ತು ನೀರಿಗೆ ತುಳಸಿ ಎಲೆಗಳನ್ನು ಹಾಕಿಟ್ಟರೆ ಅದರಿಂದ ಗ್ರಹಣದ ಪರಿಣಾಮ ಕಡಿಮೆ ಆಗುವುದು.

ಇನ್ನು, ಗ್ರಹಣ ಮುಕ್ತಾಯವಾದ ನಂತರ ಸ್ನಾನ ಮಾಡಿ ಬೆರೆ ಬಟ್ಟೆ ಹಾಕಿಕೊಳ್ಳಬೇಕು. ಸೂರ್ಯ ದೇವರಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸುವುದಲ್ಲದೆ, ಗರ್ಭಿಣಿಯರು ಮನೆಯೊಳಗೆ ಇರಬೇಕು ಮತ್ತು ಸಂತಾನ ಗೋಪಾಲ ಮಂತ್ರ ಪಠಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement