ನವದೆಹಲಿ: ಇಂದು ಬಿಜೆಪಿ ಚಾಣಕ್ಯ, ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರ ಜನ್ಮದಿನ. ಅಮಿತ್ ಷಾ ಅವರು ಗುಜರಾತ್ ರಾಜ್ಯದಲ್ಲಿ ಸತತ ನಾಲ್ಕು ಭಾರಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಅಮಿತ್ ಷಾ ಅವರು ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಸಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರು ಪ್ರಸ್ತುತ ಕೇಂದ್ರ ಸರ್ಕಾರದ ಹೋಮ್ ಮಿನಿಸ್ಟರ್ ಆಗಿ ಅಮಿತ್ ಷಾ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಮಿತ್ ಷಾ ಅವರ ರಾಜಕೀಯ ತಂತ್ರದಿಂದಾಗಿ ಎರಡು ಬಾರಿ ಲೋಕಸಭಾ ಚುನಾವಣೆ ಗೆಲ್ಲಿಸಿದ ಅವರನ್ನು ಬಿಜೆಪಿಯ ಚಾಣಕ್ಯ ಎಂದು ಕೂಡ ಕರೆಯತ್ತಾರೆ.
ಅಮಿತ್ ಷಾ ಅವರ ಹುಟ್ಟುಹಬ್ಬವಾದ ಇಂದು ಪ್ರದಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಹ್ಲಾದ್ ಜೋಶಿ, ಶ್ರೀರಾಮುಲು,ಸದಾನಂದ ಗೌಡ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಬಿ.ಸಿ ಪಾಟೀಲ್ ಗಣ್ಯರು ಅಮಿತ್ ಷಾ ಅವರಿಗೆ ಶುಭ ಕೋರಿದ್ದಾರೆ.
ಅಮಿತ್ ಷಾ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಿ ಎಸ್ ಯಡಿಯೂರಪ್ಪ:
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ಧೀರ್ಘಾಯುಷ್ಯ ಮತ್ತು ದೇಶಸೇವೆಯಲ್ಲಿ ಮತ್ತಷ್ಟು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ಧೀರ್ಘಾಯುಷ್ಯ ಮತ್ತು ದೇಶಸೇವೆಯಲ್ಲಿ ಮತ್ತಷ್ಟು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ.
Warm birthday greetings to Union Home Minister Shri Amit Shah Ji. Praying for his long & healthy life. @AmitShah pic.twitter.com/AN22RY1MdZ
— B.S. Yediyurappa (@BSYBJP) October 22, 2020
ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಅಮಿತ್ ಷಾ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ
Birthday wishes to Shri @AmitShah Ji. Our nation is witnessing the dedication and excellence with which he is contributing towards India’s progress. His efforts to make BJP stronger are also noteworthy. May God bless him with a long and healthy life in service of India.
— Narendra Modi (@narendramodi) October 22, 2020