ಇಂದು ಭಾರತರತ್ನ, ಮಿಸೈಲ್ ಮ್ಯಾನ್ ‘ಅಬ್ದುಲ್ ಕಲಾಂ’ ಅವರ ಜನ್ಮದಿನ

ನವದೆಹಲಿ : ಇಂದು ಮಾಜಿ ರಾಷ್ಟ್ರಪತಿ, ಭಾರತರತ್ನ, ಪದ್ಮಭೂಷಣ ಮಿಸೈಲ್ ಮ್ಯಾನ್ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನ. ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ, ಇವರು…

ನವದೆಹಲಿ : ಇಂದು ಮಾಜಿ ರಾಷ್ಟ್ರಪತಿ, ಭಾರತರತ್ನ, ಪದ್ಮಭೂಷಣ ಮಿಸೈಲ್ ಮ್ಯಾನ್ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನ.

ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ, ಇವರು 1931 ರಲ್ಲಿ ಅಕ್ಟೊಬರ್ 15 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಕಲಾಂ ಅವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ನಡೆಸಿದ್ದು, ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋನಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

ಅಬ್ದುಲ್ ಕಲಾಂ ಅವರು ಭಾರತದ ಮೊದಲ ಯಶಸ್ವಿ ಕ್ಷಿಪಣಿ ಮತ್ತು ಪರಮಾಣು ಕಂಡುಹಿಡಿಯುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕಾರಣಕ್ಕೆ ಅಬ್ದುಲ್ ಕಲಾಂ ಅವರನ್ನು “ಮಿಸೈಲ್ ಮ್ಯಾನ್ ಆಫ್ ಇಂಡಿಯಾ “ಎಂದು ಸಹ ಕರೆಯುತ್ತಾರೆ.

Vijayaprabha Mobile App free

ಇದಷ್ಟೇ ಅಲ್ಲದೆ ಕಲಾಂ ಅವರು ಭಾರತದ ಅತ್ಯುನ್ನತ ಹುದ್ದೆ 11ನೇ ರಾಷ್ಟ್ರಪತಿಯಾಗಿ ಕೂಡ ಸೇವೆ ಸಲ್ಲಿಸಿದ ಅವರ ಸಾಧನೆ ಅಪಾರ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಭಾರತರತ್ನ, ಪದ್ಮಭೂಷಣ, ಪದ್ಮ ವಿಭೂಷಣ, ರಾಮಾನುಜನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಇದನ್ನು ಓದಿ: 22 ವರ್ಷದ ನಂತರ ಮತ್ತೆ ಜೊತೆಯಾಗಲಿರುವ ‘ಜೀನ್ಸ್’ ಜೋಡಿ: ಖ್ಯಾತ ನಟಿ ತಬು ಪಾತ್ರದಲ್ಲಿ ಐಶ್ವರ್ಯ ರೈ…?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.