ಇಂದು ಸಂಭ್ರಮದ ಗಣೇಶ ಚತುರ್ಥಿ; ಟ್ರೆಂಡ್‌ ಸೃಷ್ಟಿಸಿವೆ ‘ಸಿನಿ’ ಗಣಪನ ಮೂರ್ತಿಗಳು

ಇಂದು ಗಣೇಶ ಚತುರ್ಥಿ ಹಬ್ಬವಾಗಿದ್ದು, ಪ್ರತಿವರ್ಷ ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗೌರಿಯ ಮೈಕೊಳೆಯಿಂದ ಸೃಷ್ಟಿಯಾದವನೇ ಗಣೇಶ. ಭೂಲೋಕಕ್ಕೆ ಬಂದಿರುವ ತಾಯಿ ಗೌರಿಯನ್ನು ಮರಳಿ ಕೈಲಾಸಕ್ಕೆ ಕರೆದುಕೊಂಡು ಹೋಗುವ…

Ganesha Festival vijayaprabha news

ಇಂದು ಗಣೇಶ ಚತುರ್ಥಿ ಹಬ್ಬವಾಗಿದ್ದು, ಪ್ರತಿವರ್ಷ ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗೌರಿಯ ಮೈಕೊಳೆಯಿಂದ ಸೃಷ್ಟಿಯಾದವನೇ ಗಣೇಶ. ಭೂಲೋಕಕ್ಕೆ ಬಂದಿರುವ ತಾಯಿ ಗೌರಿಯನ್ನು ಮರಳಿ ಕೈಲಾಸಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ಗಣೇಶನದ್ದು.

ಹೀಗಾಗಿ ಇಂದು ಭುವಿಗೆ ಬರುವ ಭಗವಂತನಿಗೆ ವಿವಿಧ ಭಕ್ಷ್ಯ ಬಡಿಸಿ ಪೂಜಿಸಲಾಗುತ್ತದೆ. ಗಣೇಶನ ಆಗಮನವನ್ನು ವಾರಗಟ್ಟಲೇ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶ ಗಜಮುಖನಾಗಿ, ವಿಘ್ನ ವಿನಾಶಕನಾಗಿ ಮೊದಲ ಪೂಜೆ ಪಡೆದುಕೊಳ್ಳುತ್ತಾನೆ.

ಟ್ರೆಂಡ್‌ ಸೃಷ್ಟಿಸಿವೆ ‘ಸಿನಿ’ ಗಣಪನ ಮೂರ್ತಿಗಳು:

Vijayaprabha Mobile App free

Ganesh Chaturthi

ಇನ್ನು, ದೇಶದಾದ್ಯಂತ ಇಂದು ಗಣೇಶ ಚತುರ್ಥಿಯ ಸಂಭ್ರಮ ಮನೆಮಾಡಿದ್ದು, ಕಣ್ಣು ಹಾಯಿಸಿದ ಕಡೆಯೆಲ್ಲ ಗಣಪನ ಮೂರ್ತಿಗಳದ್ದೇ ಕಾರುಬಾರು. ಈ ಗಣೇಶೋತ್ಸವಕ್ಕೆ ತರಹೇವಾರಿ ವಿನ್ಯಾಸದ ಗಣಪನ ಮೂರ್ತಿಗಳು ಮಾರಾಟಕ್ಕೆ ಬಂದಿದ್ದು, ಈ ಪೈಕಿ ಸಿನಿಮಾ ನಟರ ಅವತಾರದ ಮೂರ್ತಿಗಳು ಗಮನ ಸೆಳೆದಿವೆ.

ಹೌದು, ರಾಜ್ಯದಲ್ಲಿ ‘ಪುನೀತ್‌ ಗಣಪ’ ಎಂದೇ ಟ್ರೆಂಡ್‌ ಸೃಷ್ಟಿಯಾಗಿದ್ದರೆ, ತೆಲುಗು ನಟ ಅಲ್ಲು ಅರ್ಜುನ್‌ ಅವರ ‘ಪುಷ್ಪ’ ಅವತಾರದ ಗಣಪ, ‘RRR’ ಸಿನಿಮಾದಲ್ಲಿ ರಾಮ್‌ಚರಣ್‌ ರೂಪದ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.