ಇಂದು ದೇಶದಾತ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆಯಲ್ಲಿ ಪ್ರಧಾನಿ ಭಾಷಣ: ವೀಕ್ಷಿಸುವುದು ಹೇಗೆ?

ಪ್ರತಿಯೊಬ್ಬ ಭಾರತೀಯನಿಗೆ ಇಂದು ಹಬ್ಬದ ದಿನ. ಹೌದು, ಬ್ರಿಟಿಷರ ದಾಸ್ಯದಿಂದ ನಾವು ಬಿಡುಗಡೆಯಾಗಿ ಇಂದಿಗೆ 75 ವರ್ಷವಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಅವರು…

Independence day celebration

ಪ್ರತಿಯೊಬ್ಬ ಭಾರತೀಯನಿಗೆ ಇಂದು ಹಬ್ಬದ ದಿನ. ಹೌದು, ಬ್ರಿಟಿಷರ ದಾಸ್ಯದಿಂದ ನಾವು ಬಿಡುಗಡೆಯಾಗಿ ಇಂದಿಗೆ 75 ವರ್ಷವಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ.

ಅವರು ಹಾಕಿಕೊಟ್ಟ ದೇಶಪ್ರೇಮದ ಹಾದಿಯಲ್ಲಿಯೇ ನಾವು ಸಾಗುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಾದ ಸುದಿನವಿಂದು. ಹೋರಾಟ, ಪ್ರತಿಭಟನೆ, ಜೈಲುವಾಸ ಹೀಗೆ ನರಕಯಾತನೆ ಮೂಲಕ ದೇಶ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂಬುದನ್ನು ನಾವು ಎಂದಿಗೂ ಮರೆಯುವಂತಿಲ್ಲ.

ಇಂದು ಪ್ರಧಾನಿ ಭಾಷಣ: ವೀಕ್ಷಿಸುವುದು ಹೇಗೆ?

Vijayaprabha Mobile App free

narendra modi

ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಲು ಇಡೀ ದೇಶ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ.

ಹೌದು, ಇಂದು ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ನಡೆಯಲಿದ್ದು, ನಂತರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿಯ ಭಾಷಣವನ್ನು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ನೇರಪ್ರಸಾರ ಮಾಡಲಿದ್ದು, PIB ಯುಟ್ಯೂಬ್ ಚಾನೆಲ್ ಮತ್ತು ಟ್ವಿಟರ್ ಹ್ಯಾಂಡಲ್ ಮೂಲಕವೂ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.