ನವದೆಹಲಿ: ಇಂದು ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 113ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದರು. ಈ ಕುರಿತು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದೂ, ‘ಭಗತ್‍ಸಿಂಗ್ ಅವರ ಶೌರ್ಯ ಎಲ್ಲಾ ವಯಸ್ಸಿನವರಿಗೂ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
ಭಗತ್ ಸಿಂಗ್ ಅವರ ತ್ಯಾಗ, ಬಲಿದಾನ ಪ್ರತಿಯೊಬ್ಬ ಭಾರತೀಯನಿಗೂ ಆದರ್ಶವಾಗಿದೆ. ಅವರ ಧೈರ್ಯ ಮತ್ತು ಶೌರ್ಯ ದೇಶವಾಸಿಗಳಿಗೆ ಯುಗಯುಗದಲ್ಲಿ ಹುಮ್ಮಸ್ಸು ನೀಡುತ್ತದೆ’ ಎಂದು ಸ್ರಾತಂತ್ರ ಹೋರಾಟದ ವಿಡಿಯೋವೊಂದನ್ನು ಹಾಕಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಜನ್ಮ ದಿನವಾದ ಇಂದು ಅರೋಗ್ಯ ಸಚಿವ ಶ್ರೀರಾಮುಲು, ಪ್ರಹ್ಲಾದ್ ಜೋಶಿ, ಅರಣ್ಯ ಸಚಿವ ಆನಂದ್ ಸಿಂಗ್, ಪ್ರತಾಪ್ ಸಿಂಹ, ಎಂಪಿ ರೇಣುಕಾಚಾರ್ಯ, ಸುಧಾಕರ್, ಜಗದೀಶ್ ಶೆಟ್ಟರ್, ಶೋಭಾ ಕರಂದಾಜ್ಲ್, ಲಕ್ಷ್ಮಣ್ ಸವದಿ, ಸಿಟಿ ರವಿ, ಕೆ.ಎಸ ಈಶ್ವರಪ್ಪಾ ಸೇರಿ ಅನೇಕ ಗಣ್ಯರು ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ನೆನೆದಿದ್ದಾರೆ.
मां भारती के वीर सपूत अमर शहीद भगत सिंह की जयंती पर उन्हें कोटि-कोटि नमन। वीरता और पराक्रम की उनकी गाथा देशवासियों को युगों-युगों तक प्रेरित करती रहेगी। pic.twitter.com/LMy2Mlpkol
— Narendra Modi (@narendramodi) September 28, 2020