ಇಂದು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಸೆಣಸಾಟ; ಫಾರ್ಮ್ ಗೆ ಮರಳುವರೇ ಕೊಹ್ಲಿ..?

ದುಬೈ : ಇಂದು ದಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ಪಂದ್ಯದಲ್ಲಿ…

RCB vs MI-vijayaprabha

ದುಬೈ : ಇಂದು ದಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡಿತ್ತು. ನಂತರ ಆಡಿದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 97 ರನ್ ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳಲು ಸಜ್ಜಾಗಿದ್ದು, ಗೆಲ್ಲುವ ನಿರೀಕ್ಷೆಯಲ್ಲಿ ತಂಡ ಕಣಕ್ಕಿಳಿಯಲಿದೆ.

ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳಾದ ಅರೋನ್ ಫಿಂಚ್, ಜೋಶ್ ಫಿಲಿಪ್ಸ್, ಹಾಗು ಸೌತ್ ಆಫ್ರಿಕಾ ವೇಗಿ ಡೆಲ್ ಸ್ಟೇನ್ ನಿರೀಕ್ಸಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಬ್ಯಾಟ್ಸಮನ್ ಜೋಶ್ ಫಿಲಿಪ್ಸ್, ಬೌಲರ್ ಡೆಲ್ ಸ್ಟೇನ್ ಅವರ ಶ್ರೀಲಂಕಾದ ಬೌಲರ್ ಉಸಿರು ಉಡಾನ, ಇಂಗ್ಲೆಂಡ್ ನ ಆಲ್ರೌಂಡರ್ ಮೋಹಿನ್ ಅಲಿ ಅವರನ್ನು ಆಡಿಸಲು ಆರ್ ಸಿ ಬಿ ತಂಡ ಚಿನ್ತನೆ ನಡೆಸಿದೆ ಎನ್ನಲಾಗಿದೆ.

Vijayaprabha Mobile App free

ಇನ್ನು ಮುಂಬೈ ಇಂಡಿಯನ್ಸ್ ತಂಡ ಸಮತೋಲನದಿಂದ ಕೂಡಿದ್ದು ಬಿಗ್ ಹಿಟ್ಟರ್ ಗಳನ್ನೂ ಹೊಂದಿದ್ದು, ಬಾಲಿಶವಾಗಿದೆ. ಮುಂಬೈ ತಂಡದಲ್ಲಿ ನಾಯಕ ರೋಹಿತ್ ಶರ್ಮ, ಕ್ವಿಂಟನ್ ಡಿಕಾಕ್ , ಸೂರ್ಯ ಕುಮಾರ್ ಯಾದವ್ ಅವರಂತಹ ಬ್ಯಾಟ್ಸಮನ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಅವರಂತಹ ಆಲ್ರೌಂಡರ್, ಬುಮ್ರಾ, ಪ್ಯಾಟಿನ್ಸನ್, ಬೋಲ್ಟ್ ಅವರಂತಹ ಬೌಲರ್ ಗಳಿದ್ದಾರೆ.

ಮುಂಬೈ ಇಂಡಿಯನ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೂ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 18 ಬರಿ ಗೆದ್ದಿದ್ದರೆ, ಬೆಂಗಳೂರು ಮಾತ್ರ ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ನಡುವೆ ನಡೆಯುವ ಪಂದ್ಯದಲ್ಲಿ, ಗೆಲುವು ಯಾರಿಗೆ ಎಂಬುದು ಕಾದು ನೋಡಬೇಕಾಕಿದೆ.

ಇದನ್ನು ಓದಿ: ಮಾಯಾಂಕ್ ಶತಕ ವ್ಯರ್ಥ; ಸ್ಯಾಮ್ಸನ್ ಅಬ್ಬರ; ಪಂಜಾಬ್ ವಿರುದ್ಧ ರಾಜಸ್ತಾನ್ ರಾಯಲ್ಸ್ ದಾಖಲೆಯ ಜಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.