ಅಬುದಾಬಿ: ಇಂದು ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2020 ರ ಆವೃತ್ತಿಯ 15 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯ ನಡೆಯಲಿದೆ.
ಆರ್‌ಸಿಬಿ ಮತ್ತು ಆರ್‌ಆರ್ ಎರಡೂ ತಂಡಗಳು ಆಡಿದ ಮೂರೂ ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಪಡೆದಿದ್ದು, ಇದುವರೆಗೆ ಆಡಿದ ಮೂರು ಪಂದ್ಯಗಳಿಂದ ಎರಡರಲ್ಲಿ ಗೆಲುವು ದಾಖಲಿಸಿವೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಆರಂಭಿಕ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ 16 ರನ್ ಮತ್ತು ನಾಲ್ಕು ವಿಕೆಟ್ ಜಯ ಸಾಧಿಸಿತ್ತು. ಆದರೆ ದುಬೈನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 37 ರನ್ ಗಳ ಸೋಲನ್ನು ಅನುಭವಿಸಿತು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್‌ಗಳ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ ಆರ್ ಸಿಬಿ ತಂಡ ಆಡಿದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 97 ರನ್ ಗಳ ಹೀನಾಯ ಸೋಲು ಅನುಭವಿಸಿತು. ಆರ್ ಸಿಬಿ ತಂಡ ಆಡಿದ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮತ್ತು ನಾಲ್ಕು ಬಾರಿ ವಿಜೇತ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್ ಗೆಲುವು ದಾಖಲಿಸಿದೆ.
ಎರಡೂ ತಂಡಗಳು ನೋಡಲು ಸಮತೋಲನದಿಂದ ಕೂಡಿದ್ದು, ಎಲ್ಲಾ ಮೂರು ವಿಭಾಗಗಳಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮವಾಗಿ ಕಾಣುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ವಿಭಾಗದ್ದೇ ಚಿಂತೆಯಾಗಿದೆ.
ತಂಡಗಳ ಮುಖಾಮುಖಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಐಪಿಎಲ್ ನಲ್ಲಿ ಒಟ್ಟು 21 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಆರ್‌ಆರ್ 10 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಆರ್‌ಸಿಬಿ 8 ಪಂದ್ಯಗಳನ್ನು ಗೆದ್ದಿದೆ.ಇನ್ನು ಮೂರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ರದ್ದಾಗಿವೆ.
ತಂಡಗಳ ಸಂಭಾವ್ಯ ಪಟ್ಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್, ಗುರ್ಕೀರತ್ ಸಿಂಗ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಆಡಮ್ ಜಂಪಾ, ಇಸುರು ಉಡಾನ, ಪವನ್ ನೇಗಿ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪಾರ್ಥಿವ್ ಪಟೇಲ್,ಕ್ರಿಸ್ ಮೋರಿಸ್, ಶಹಬಾಜ್ ಅಹ್ಮದ್, ಡೇಲ್ ಸ್ಟೇನ್, ಮೊಯೀನ್ ಅಲಿ, ಜೋಶ್ ಫಿಲಿಪ್.
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಅಂಕಿತ್ ರಾಜ್‌ಪೂತ್, ಶ್ರೇಯಾಸ್ ಗೋಪಾಲ್, ರಾಹುಲ್ ತೇವಟಿಯಾ, ಜಯದೇವ್ ಉನಾದ್ಕಟ್, ಟಾಮ್ ಕರಣ್, ರಾಬಿನ್ ಉತ್ತಪ್ಪ, ಜೋಫ್ರಾ ಆರ್ಚರ್, ರಿಯಾನ್ ಪರಾಗ್, ಬೆನ್ ಸ್ಟೋಕ್ಸ್, ಆಂಡ್ರ್ಯೂ ಟೈ, ಕಾರ್ತಿಕ್ ತ್ಯಾಗಿ, ಮಾಯಾಂಕ್ ಮಾರ್ಕಂಡೆ, ಮಹಿಪಾಲ್ ಲೊಮರ್, ಓಶೇನ್ ಥಾಮಸ್, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಆಕಾಶ್ ಸಿಂಗ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ, ಶಶಾಂಕ್ ಸಿಂಗ್, ವರುಣ್ ಆರನ್, ಅನಿರುದ್ಧ ಜೋಶಿ.
ಇದನ್ನು ಓದಿ: ಹ್ಯಾಟ್ರಿಕ್ ಸೋಲುಂಡ ಚೆನ್ನೈ; ಸನ್ ರೈಸರ್ಸ್ ಹೈದರಾಬಾದ್ ಗೆ 7 ರನ್ ಗೆಲವು