Today Gold Silver Rate: ಕಳೆದ ಕೆಲವು ದಿನಗಳಿಂದ ಹಾವು-ಏಣಿ ಆಟ ಆಡುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು (ಫೆಬ್ರವರಿ 10, 2026) ಭಾರಿ ಬದಲಾವಣೆ ಕಂಡುಬಂದಿದೆ. ಬೆಳ್ಳಿ ಖರೀದಿಸಲು ಪ್ಲಾನ್ ಮಾಡುತ್ತಿದ್ದವರಿಗೆ ಇದು ಸುವರ್ಣಾವಕಾಶ. ಏಕೆಂದರೆ, ಬೆಳ್ಳಿಯ ದರದಲ್ಲಿ ಭಾರೀ ಇಳಿಕೆಯಾಗಿದ್ದರೆ, ಚಿನ್ನದ ದರ ಸ್ಥಿರವಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದಿನ ದರಗಳ ಸಂಪೂರ್ಣ ವಿವರ ಇಲ್ಲಿದೆ.
ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ಇಳಿಕೆ!
ಹೌದು, ನೀವು ಕೇಳುತ್ತಿರುವುದು ನಿಜ. ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ ₹10,000 ರೂಪಾಯಿ ಇಳಿಕೆಯಾಗಿದ್ದು, ನಿನ್ನೆ 3 ಲಕ್ಷದ ಆಸುಪಾಸಿನಲ್ಲಿದ್ದ ಬೆಳ್ಳಿ ದರ, ಇಂದು ಇಳಿಕೆಯಾಗಿ ₹2,90,000 ಕ್ಕೆ (ಪ್ರತಿ ಕೆಜಿಗೆ) ತಲುಪಿದೆ. ಬೆಳ್ಳಿ ಪಾತ್ರೆ ಅಥವಾ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಇದು ಸೂಕ್ತ ಸಮಯ.
ಚಿನ್ನದ ಬೆಲೆ ಯಥಾಸ್ಥಿತಿ (Gold Rate Stable)
ಇನ್ನು, ಬೆಳ್ಳಿ ಇಳಿಕೆಯಾಗಿದ್ದರೆ, ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯ ದರವೇ ಇಂದೂ ಮುಂದುವರೆದಿದ್ದು, 24 ಕ್ಯಾರೆಟ್ ಚಿನ್ನ (ಅಪರಂಜಿ): 10 ಗ್ರಾಂಗೆ ₹1,57,910 ಇದ್ದು, 22 ಕ್ಯಾರೆಟ್ ಚಿನ್ನ (ಆಭರಣ): 10 ಗ್ರಾಂಗೆ ₹1,44,750 ಹಾಗು 18 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹1,18,440 ರೂ ಇದೆ.
ಖರೀದಿದಾರರಿಗೆ ಸಲಹೆ
ಮಾರುಕಟ್ಟೆಯ ತಜ್ಞರ ಪ್ರಕಾರ, ಬೆಳ್ಳಿ ಬೆಲೆಯಲ್ಲಿನ ಈ ಇಳಿಕೆ ತಾತ್ಕಾಲಿಕವಾಗಿರಬಹುದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದಾಗಿ ದರಗಳು ಮತ್ತೆ ಏರುವ ಸಾಧ್ಯತೆ ಇದೆ. ಹೀಗಾಗಿ, ಬೆಳ್ಳಿ ಕೊಳ್ಳುವವರು ಇಂದೇ ಬುಕ್ ಮಾಡಿಕೊಳ್ಳುವುದು ಉತ್ತಮ.




