ಬೆಂಗಳೂರು: ಏರುತ್ತಲೇ ಇದ್ದ ಚಿನ್ನದ ಬೆಲೆಗೆ ಇಂದು ಕೊಂಚ ಬ್ರೇಕ್ ಬಿದ್ದಿದ್ದು, ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನ ಖರೀದಿಸಲು ಯೋಚಿಸುತ್ತಿದ್ದ ಗ್ರಾಹಕರಿಗೆ ತುಸು ನಿರಾಳತೆ ಸಿಕ್ಕಂತಾಗಿದೆ.
ಇದನ್ನೂ ಓದಿ: ಸಾಧು ಕೋಕಿಲ, ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್: ಲೈಂಗಿಕ ದೌರ್ಜನ್ಯ ಕೇಸ್ ರದ್ದುಗೊಳಿಸಿದ ಹೈಕೋರ್ಟ್!
ಎಷ್ಟಿದೆ ಇಂದಿನ ಚಿನ್ನದ ದರ? (Gold Rate Drop)

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಗಮನಾರ್ಹವಾಗಿ ಇಳಿಕೆಯಾಗಿದ್ದು, 24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ 10 ಗ್ರಾಂಗೆ ₹1,200 ರಷ್ಟು ಇಳಿಕೆಯಾಗಿದೆ. ಇದರೊಂದಿಗೆ ಇಂದಿನ ದರ ₹1,58,400 ಕ್ಕೆ ತಲುಪಿದ್ದು, 22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ 10 ಗ್ರಾಂಗೆ ₹1,100 ರಷ್ಟು ಕಡಿಮೆಯಾಗಿದ್ದು, ಪ್ರಸ್ತುತ ಬೆಲೆ ₹1,45,200 ಆಗಿದೆ.
ಇದನ್ನೂ ಓದಿ: ಇನ್ನೂ ಒಲೆ ಊದುತ್ತಿದ್ದೀರಾ? ಸರ್ಕಾರವೇ ನೀಡುತ್ತಿದೆ ಫ್ರೀ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್! ಪಡೆಯುವುದು ಹೇಗೆ?
ಬೆಳ್ಳಿ ಬೆಲೆ ಯಥಾಸ್ಥಿತಿ (Silver Rate)
ಇನ್ನು, ಚಿನ್ನದ ಬೆಲೆ ಇಳಿಕೆಯಾದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಇದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಸ್ಥಿರವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ₹3,00,000 (3 ಲಕ್ಷ) ರೂಪಾಯಿ ಇದೆ.
ಗಮನಿಸಿ (Note) : ಇದು ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯ ದರವಾಗಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತು ಆಭರಣ ಮಳಿಗೆಗಳಲ್ಲಿ (Jewellery Shops) ತೆರಿಗೆ ಹಾಗೂ ಮಜೂರಿ (Making charges) ಕಾರಣದಿಂದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದಾಗಿದ್ದು, ಖರೀದಿಗೂ ಮುನ್ನ ನಿಮ್ಮ ಹತ್ತಿರದ ಜ್ಯುವೆಲ್ಲರಿ ಅಂಗಡಿಯಲ್ಲಿ ದರ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ: VSKUB Recruitment 2026 | ತಿಂಗಳಿಗೆ ₹2 ಲಕ್ಷ ಸಂಬಳ! 139 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೇ ಲಾಸ್ಟ್ ಚಾನ್ಸ್




