ಬೆಂಗಳೂರು: ಶಾಲಾ ಕಾಲೇಜುಗಳು ಶುರು ಮಾಡುವುದಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಂ ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕರೋನ ಸಂದರ್ಭದಲ್ಲಿ ಸಣ್ಣ ಮಕ್ಕಳ ಶಾಲೆಗಳನ್ನು ತೆರೆಯುತ್ತಾರೆ ಎಂದು ಹೇಳುತ್ತಾರೆ. ಯಾವ ವಾದ ಏನೇ ಇರಲಿ ಒಂದು ಸಣ್ಣ ಮಗುವಿಗೆ ಏನಾದರು ಕರೋನ ಸಂಬಂದಿತ ತೊಂದರೆಗಳು ಉಂಟಾದರೆ ಇಡೀ ರಾಜ್ಯದ ತಂದೆ ತಾಯಿಗಳು ಆತಂಕ ಪಡಲು ಶುರು ಮಾಡುತ್ತಾರೆ ಎಂದು ಸೀತಾರಾಮ್ ಅವರು ಹೇಳಿದ್ದಾರೆ.
ಇನ್ನು ಕರೋನ ಸೋಂಕಿನ ಪ್ರಮಾಣ ಮಕ್ಕಳಲ್ಲಿ ಹೆಚ್ಚಾದರಂತೂ ರಾಜ್ಯದ ಅಂತಃ ಕಳೆ ಮಂಕಾಗಿ ಪಾಪಪ್ರಜ್ಞೆ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.
ಒಂದು ವರ್ಷದ ಮಕ್ಕಳಿಗೆ ಪ್ರಮೋಷನ್ ಕೊಟ್ಟರೆ ನಷ್ಟವೇನಿಲ್ಲ, ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಬುದ್ದಿ, ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಸದ್ಯಕ್ಕೆ ಶಾಲೆ ಶುರು ಮಾಡುವುದು ಬೇಡ ಎಂದು ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಂ ಹೇಳಿದ್ದಾರೆ.