ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಫುಲ್ ಟಿಕೆಟ್ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಐದು ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು.
ಈಗ ಸ್ಪಷ್ಟನೆ ನೀಡಿರುವ ರೈಲ್ವೆ ಇಲಾಖೆ, ಈ ವಯಸ್ಸಿನ ಮಕ್ಕಳು ಪೋಷಕರೊಡನೆ ಸಂಚರಿಸುವ ಕಾರಣದಿಂದ ಅವರಿಗೆ ಟಿಕೆಟ್ ಅವಶ್ಯಕತೆ ಇರುವುದಿಲ್ಲ ಎಂದಿದೆ.
ಆದರೆ, ಐದು ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಬರ್ತ್ (ಸೀಟು) ಬೇಕು ಎಂದಾದರೆ, ಟಿಕೆಟ್‌ನ ಪೂರ್ತಿ ಹಣ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ. ಪ್ರತ್ಯೇಕ ಬರ್ತ್ ಬೇಕು ಎಂದಾದರೆ, ದೊಡ್ಡವರಿಗೆ ಇರುವ ಟಿಕೆಟ್ ದರವನ್ನೇ ಪಾವತಿ ಮಾಡಬೇಕು ಎಂದೂ ಸುತ್ತೋಲೆಯಲ್ಲಿ ಹೇಳಿತ್ತು.