ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು, ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಮೂವರ ಬಂಧನ ಖಚಿತಪಡಿಸಿದ್ದು, ಮೊದಲ ಆರೋಪಿ ಸುಳ್ಯದ ಶಿಯಾಬ್, 2ನೇ ಆರೋಪಿ ಬಶೀರ್ ಮತ್ತು 3ನೇ ಆರೋಪಿ ರಿಯಾಜ್ ಎಂದು ತಿಳಿಸಿದ್ದಾರೆ.
ಇನ್ನು, ಮೂವರು ಮಹಿಳೆಯರೂ ಹತ್ಯೆಗೆ ನೆರವಾಗಿದ್ದು, ಕಾಸರಗೋಡಿನ ಮಸೀದಿಯೊಂದರಲ್ಲಿ ಆರೋಪಿಗಳು ಆಶ್ರಯ ಪಡೆದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆಗೆ ಕಾರಣವೇನು?
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಗೆ ಹಲಾಲ್, ಜಟ್ಕಾ ಕಟ್ ಅಭಿಯಾನಯೇ ಪ್ರಮುಖ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೌದು, ಹಲಾಲ್ ವಿವಾದದ ಬಳಿಕ ಪ್ರವೀಣ್ ಕೋಳಿ ವ್ಯಾಪಾರದ ಅಂಗಡಿ ಆರಂಭ ಮಾಡಿದ್ದರು. ಇದಾದ ಬಳಿಕ 12 ಮಂದಿಯ ತಂಡ ಮೂವರ ಕೊಲೆಗೆ ಸ್ಕೆಚ್ ಹಾಕಿತ್ತು ಎನ್ನಲಾಗಿದೆ. ಹಲಾಲ್ ಅಭಿಯಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕೊಲೆಗೆ ಸಂಚು ರೂಪಿಸಿದ್ದ ಹಂತಕರಿಗೆ ಮಸೂದ್ ಹತ್ಯೆ ಒಂದು ನೆಪವಾಗಿತ್ತು.
ಹೀಗಾಗಿ, ಮೊದಲು ಪ್ರವೀಣ್ ಕೊಲೆಗೆ ನಿರ್ಧರಿಸಲಾಗಿತ್ತು ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.




