ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಂದೇಶವೊಂದು ಹರಿದಾಡುತ್ತಿದ್ದು, ಕೊರೋನಾ ಲಸಿಕೆಯ ಎರಡು ಡೋಸ್ ತೆಗೆದುಕೊಂಡವರಿಗೆ 5,000 ರೂಪಾಯಿ ಸಿಗುತ್ತದೆ ಅನ್ನುವ ಸಂದೇಶ ವೈರಲ್ ಆಗಿದೆ.
ಆದರೆ, ಈ ಸಂದೇಶ ಸಂಪೂರ್ಣವಾಗಿ ಸುಳ್ಳು ಮಾಹಿತಿಯಾಗಿದ್ದು, ಸರ್ಕಾರ ಇಂತಹ ಯಾವುದೇ ಘೋಷಣೆ ಮಾಡಿಲ್ಲ. ಈ ಸಂದೇಶದ ಜತೆ ಲಿಂಕ್ ಕೂಡ ಹರಿದಾಡುತ್ತಿದ್ದು, ಇದರ ಮೇಲೆ ಕ್ಲಿಕ್ ಮಾಡಿ ಎಂದು ಹೇಳಲಾಗಿದೆ. ಈ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಪಡೆದು ಮಾರ್ಕೆಟಿಂಗ್ ಏಜೆನ್ಸಿಗಳಿಗೆ ನೀಡುವ ಕುತಂತ್ರ ಇದಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.