Dasara | ಈ ಬಾರಿ 11 ದಿನಗಳ ದಸರಾ: ಇದರ ಹಿನ್ನೆಲೆ ಮತ್ತು ವಿಶೇಷತೆ

 Dasara : ಈ ಬಾರಿ ರಾಜ್ಯದಲ್ಲಿ ದಸರಾ ವೈಭವದಿಂದ 11 ದಿನಗಳ ಕಾಲ ನಡೆಯಲಿದೆ. ದಸರಾ ಇತಿಹಾಸದಲ್ಲೇ ಬಹುತೇಕ ಇದೇ ಮೊದಲ ಬಾರಿಗೆ ಸಂಭವಿಸಲಿದ್ದು, ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ…

Mysore Dasara

 Dasara : ಈ ಬಾರಿ ರಾಜ್ಯದಲ್ಲಿ ದಸರಾ ವೈಭವದಿಂದ 11 ದಿನಗಳ ಕಾಲ ನಡೆಯಲಿದೆ. ದಸರಾ ಇತಿಹಾಸದಲ್ಲೇ ಬಹುತೇಕ ಇದೇ ಮೊದಲ ಬಾರಿಗೆ ಸಂಭವಿಸಲಿದ್ದು, ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ಯಾಕೆ ಈ ಬಾರಿ ಹೀಗೆಮ ಇದರ ವಿಶೇಷತೆ ಏನು? ಎಂಬುದರ ಮಾಹಿತಿ ಇಲ್ಲಿದೆ.

ಯಾಕೆ 11 ದಿನ?

ಈ ಬಾರಿ ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ 11ನೇ ದಿನಕ್ಕೆ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ತಿಥಿಗಳ ಪ್ರಕಾರ ಸೆ. 22 ರಿಂದ ಅ. 2ರ ವರೆಗೆ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ನಡೆಯಲಿದೆ.

ದಸರಾ ಇತಿಹಾಸ

ದಸರಾ ಪರಂಪರೆ ಶುರುವಾಗಿ 410 ವರ್ಷ ಕಳೆದಿದ್ದು ಇಲ್ಲಿಯರೆಗೂ ಪ್ರತಿ ವರ್ಷ 10 ದಿನ ದಸರಾ ನಡೆದಿದ್ದು, ಈ ಬಾರಿ 11 ದಿನ ದಸರಾ ನಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳ ಬಗ್ಗೆ ಧಾರ್ಮಿಕವಾಗಿ ಚರ್ಚೆಗಳು ಶುರುವಾಗಿದ್ದು, 410 ರಿಂದ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ದಸರಾ ಆಚರಣೆ ನಡೆದಿದ್ದು 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ ಎನ್ನಲಾಗಿದೆ.

Vijayaprabha Mobile App free

ಇದು ಮೊದಲಲ್ಲ

ಈ ಬಾರಿಯ ದಸರಾ ಆಚರಣೆಯ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಾಹಿತಿ ನೀಡಿದ್ದು ಈ ಹಿಂದೆ ಅಂದರೆ 1920, 1929, 1953, 1962, 1980, 1990, 1998, 2000, 2015 ಮತ್ತು 2016 ರಲ್ಲಿ ಹನ್ನೊಂದು ದಿನಗಳ ಕಾಲ ದಸರಾವನ್ನು ಆಚರಿಸಲಾಗಿದೆ ಎ೦ದು ಒಡೆಯ‌ರ್ ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಚಿಂತಕರ ನುಡಿ

ಈ ಸ೦ಬ೦ಧ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ಅನೇಕ ಮಾಹಿತಿ ನೀಡಿದ್ದಾರೆ. ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದಾಗಿದ್ದು, ಆದರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ. ಪಂಚಾಂಗದಲ್ಲಿ ಸೆ.21 ರಂದು ಮಹಾಲಯ ಅಮಾವಾಸ್ಯೆ ಬರುತ್ತದೆ. ಇನ್ನು, ಅದರ ಮಾರನೇ ದಿನದಿಂದ ಅಂದ್ರೆ ಸೆ.22 ರಿಂದ ಅ.2ರ ವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯುತ್ತದೆ ಎಂದು ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ವಿವರಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.