ಪ್ರತಿವರ್ಷ ಸುಮಾರು 68,000 ಪುರುಷರು, ತಮ್ಮ ಲೈಂಗಿಕ ಕಾರ್ಯಕ್ಷಮತೆಯ ಕುರಿತಂತೆ ಗೂಗಲ್‌ನಲ್ಲಿ ಹೆಚ್ಚು ಹುಡುಕುತ್ತಾರೆ ಎನ್ನಲಾಗಿದೆ.
ಅಲ್ಲದೆ, ಶೇವಿಂಗ್ ಮಾಡುವುದರಿಂದ ಗಡ್ಡ ಬೆಳೆಯುತ್ತದೆಯೇ? ದಟ್ಟವಾದ ಗಡ್ಡ ಬರಲು ಏನು ಮಾಡಬೇಕು? ಟೋಪಿ ಧರಿಸುವುದರಿಂದ ಕೂದಲು ಉದುರುತ್ತದೆಯೇ? ದೇಹದ ಫಿಟ್‌ನೆಸ್‌ಗಾಗಿ ಯಾವ ರೀತಿ ವರ್ಕೌಟ್ ಮಾಡಬೇಕು? ಹುಡುಗಿಯರನ್ನು ಮೆಚ್ಚಿಸುವುದು ಹೇಗೆ? ಹುಡುಗಿಯರು ಏನನ್ನು ಇಷ್ಟಪಡುತ್ತಾರೆ? ಸ್ತನ ಕ್ಯಾನ್ಸರ್ ಪುರುಷರಿಗೂ ಬರುತ್ತದೆಯೇ? ಎಂಬುದನ್ನು ಸರ್ಚ್ ಮಾಡುತ್ತಾರೆ ಎಂದು ತಿಳಿದು ಬಂದಿದೆ.
Youtubeನಲ್ಲಿ ಹುಡುಗಿಯರು ಹುಡುಕುವುದು ಇದನ್ನೇ!
ಇನ್ನು, Youtubeನಲ್ಲಿ ತಮಗೇನು ಬೇಕೋ ಅದನ್ನು ಹುಡುಕಲು ಅವಕಾಶವಿದೆ. ಆದರೆ ಯುವತಿಯರು ಯೂಟ್ಯೂಬ್‌ನಲ್ಲಿ ಏನು ನೋಡುತ್ತಾರೆ ಅನ್ನುವ ವರದಿ ಹೊರಬಿದ್ದಿದೆ.
ಹೌದು, ಸರ್ವೇ ಪ್ರಕಾರ Youtube Shorts ಅನ್ನು ಹೆಚ್ಚು ಇಷ್ಟ ಪಡುತ್ತಾರೆ. Google Search ಜೊತೆಗೆ Youtubeನಲ್ಲಿ ಡೆಸ್ಟಿನೇಶನ್ 7, ಮ್ಯೂಸಿಕ್ ಕೂಡ ಹೆಚ್ಚು ಸರ್ಚ್ ಆಗುತ್ತವೆ ಅನ್ನುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇದರ ಜೊತೆಗೆ ಕ್ರಾಫ್ಟ್ ಐಡಿಯಾಸ್, ಫ್ಯಾಷನ್, ಚಿಕಿತ್ಸೆಗಳು & ಮನೆಮದ್ದುಗಳನ್ನು ಹುಡುಕುತ್ತಾರೆ ಎಂಬುದು ಬಯಲಾಗಿದೆ.