New Year 2025 : ಹೊಸ ವರ್ಷದ ಮೊದಲ ದಿನ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಮಾಡಿದರೆ ಇಡೀ ವರ್ಷ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಯಿದ್ದು, ಹೀಗಾಗಿ ನವ ವರುಷದ ಮೊದಲ ದಿನ ಈ ಕೆಲಸ ಮಾಡಿದರೆ ವರ್ಷಪೂರ್ತಿ ಸಂತೋಷ ಸಿಗಲಿದೆ.
ದೇವರನ್ನು ಸ್ಮರಿಸಿಕೊಳ್ಳಿ
ವರ್ಷದ ಮೊದಲ ದಿನ ಮನೆಯಲ್ಲೇ ದೇವರ ಪೂಜೆ ಮಾಡಿ, ಪ್ರಾರ್ಥಿಸಿಕೊಳ್ಳಿ. ಅಂದುಕೊಂಡ ಕೆಲಸಗಳೆಲ್ಲವೂ ಈ ವರ್ಷ ಸಾಂಗವಾಗಿ ನೆರವೇರಲಿ ಎ೦ದು ದೇವರನ್ನು ಕೇಳಿಕೊಳ್ಳಿ ಮತ್ತು ನಿಮ್ಮ ಜೀವನಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ.
ಇದನ್ನೂ ಓದಿ: Rashi bhavishya | ಈ ರಾಶಿಯವರ ಆಸೆ ಆಕಾಂಕ್ಷೆಗಳು ನನಸಾಗುವ ದಿನ ಪ್ರಾರಂಭ
ಗುರಿ ನಿರ್ಧರಿಸಿ
ಹೊಸ ವರ್ಷವು ಯಶಸ್ವಿಯಾಗಿ ಪೂರ್ಣಗೊಳ್ಳಬೇಕಾದರೆ ಸಾಧನೆಗೆ ಗುರಿಯೊ೦ದನ್ನು ನಿರ್ಧರಿಸಿಕೊಳ್ಳಿ. ಮೊದಲ ದಿನದಿಂದಲೇ ಆ ಗುರಿ ಸಾಧನೆಗೆ ಎಲ್ಲ ಪ್ರಯತ್ನ ಮಾಡಿ. ಜತೆಗೆ ಉಳಿತಾಯವನ್ನು ಆರಂಭಿಸಿ, ಅನಗತ್ಯ ಖರ್ಚು, ಮಾಡಬೇಡಿ. ಅಲ್ಲದೆ ವರ್ಷಪೂರ್ತಿ ಇದನ್ನು ಪಾಲಿಸುವ ದೃಢ ನಿರ್ಧಾರ ಕೈಗೊಳ್ಳಿ.
ದುರಾಭ್ಯಾಸ ದೂರವಿಡಿ
ನಿಮ್ಮ ಗುರಿಯನ್ನು ಸಾಧಿಸಲು ಯಾವುದು ಅಗತ್ಯವೊ, ಅದಕ್ಕೆ ಹೊಂದುವ ಸೂಕ್ತ ನಿರ್ಧಾರಗಳನ್ನೇ ಕೈಗೊಳ್ಳಿ. ದುರಾಭ್ಯಾಸವಿದ್ದರೆ ತಕ್ಷಣವೇ ಅದನ್ನು ತ್ಯಜಿಸಲು ಸಿದ್ಧರಾಗಿ. ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ, ಮನಸ್ಸಿಗೆ ಉಲ್ಲಾಸ, ದೇಹಕ್ಕೆ ಆರೋಗ್ಯ ನೀಡುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು.
ಇದನ್ನೂ ಓದಿ: Rashi bhavishya | ಈ ಐದು ರಾಶಿಗಳಿಗೆ ಮದುವೆಯ ಶುಭಯೋಗದಿಂದ ಹೊಸ ವರ್ಷ ಪ್ರಾರಂಭ
ಸಹಾಯ ಮಾಡಿ
ನಿಮಗೆ ಅನುಕೂಲವಿದ್ದರೆ ಇತರರಿಗೆ ಅಗತ್ಯ ಸಹಾಯ ಮಾಡಿ. ಹಣಕಾಸಿನ ನೆರವು ಅಥವಾ ಹಣದ ಬದಲು, ಅವಶ್ಯಕ ವಸ್ತು ಅಗತ್ಯವಿರುವವರಿಗೆ ನೀಡಿದರೆ ನೆರವಾಗುತ್ತದೆ. ಇದರಿಂದ ನಿಮಗೂ ನೆಮ್ಮದಿ ದೊರೆಯುತ್ತದೆ. ಸಹಾಯ ಪಡೆದವರ ಕೃತಜ್ಞತೆ, ಆಶೀರ್ವಾದವೂ ನಿಮಗೆ ದೊರಕುತ್ತದೆ.
ಪ್ರೀತಿಸುವುದನ್ನು ಕಲಿಯಿರಿ
ಈ ವರ್ಷದಲ್ಲಿ ನಿಮ್ಮನ್ನು ನೀವು ಪ್ರೀತಿಸಲಾರಂಭಿಸಿ. ನಿಮಗಾಗಿ ದಿನದಲ್ಲಿ ನಿಗದಿತ ಸಮಯ ನೀಡಿ. ಯೋಗ, ಧ್ಯಾನ, ವರ್ಕೌಟ್ ರೂಢಿಸಿಕೊಳ್ಳಿ. ನಿಮ್ಮ ಮನಸ್ಸು ಮತ್ತು ದೇಹ ಉಲ್ಲಾಸವಾಗಿದ್ದರೆ, ಖಂಡಿತವಾಗಿಯೂ ನೀವು ನಿಗದಿತ ಗುರಿಯನ್ನು ತಲುಪಬಹುದು.