ಈ 500 ರೂ ನೋಟುಗಳು ನಡೆಯುವುದಿಲ್ಲ, ತೆಗೆದುಕೊಳ್ಳಬೇಡಿ!; ಈ ಬಗ್ಗೆ ಕೇಂದ್ರ ಹೇಳಿದ್ದೇನು?

ಕರೆನ್ಸಿ ನೋಟುಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ. ಇಲ್ಲಿಯವರೆಗೆ 2 ಸಾವಿರ ರೂ ನೋಟುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿತ್ತು. ಆದರೆ ಈಗ ರೂ .500 ನೋಟುಗಳಿಗೆ ಸಂಬಂಧಿಸಿದ ಅಂಶದ ಬಗ್ಗೆ ವೈರಲ್…

ಕರೆನ್ಸಿ ನೋಟುಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ. ಇಲ್ಲಿಯವರೆಗೆ 2 ಸಾವಿರ ರೂ ನೋಟುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗಿತ್ತು. ಆದರೆ ಈಗ ರೂ .500 ನೋಟುಗಳಿಗೆ ಸಂಬಂಧಿಸಿದ ಅಂಶದ ಬಗ್ಗೆ ವೈರಲ್ ಆಗುತ್ತಿದೆ.

ಕೆಲವು 500 ರೂ.ಗಳ ನೋಟುಗಳನ್ನು ತೆಗೆದುಕೊಳ್ಳದಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಯುತ್ತಿದೆ. ಕೆಲವು 500 ರೂ. ನೋಟುಗಳ ಮೇಲೆ ಹಸಿರು ರೇಖೆಯು ಗಾಂಧಿ ಪ್ರತಿಮೆಗೆ ಹತ್ತಿರದಲ್ಲಿದೆ, ಆರ್‌ಬಿಐ ಸಹಿಗೆ ಹತ್ತಿರದಲ್ಲಿಲ್ಲ ಮತ್ತು ಅಂತಹ ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಕೇಂದ್ರ ಪ್ರತಿಕ್ರಿಯೆ ನೀಡಿದೆ.

ಕೇಂದ್ರ ಸರ್ಕಾರಕ್ಕೆ ಸಂಬಂದಿಸಿದ ಪಿಐಬಿ ಫ್ಯಾಕ್ಟ್ ಚೆಕ್ ಈ ಬಗ್ಗೆ ತನಿಖೆ ನಡೆಸಿದ್ದು, ಇದು ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. 500 ರೂ ನೋಟುಗಳ ಮೇಲಿನ ಹಸಿರು ರೇಖೆಯು ಗಾಂಧಿ ಪ್ರತಿಮೆಯ ಬಳಿ ಅಥವಾ ಗವರ್ನರ್ ಸಹಿಯ ಬಳಿ ಇರಲಿ ಅದು ಮಾನ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದು, ನಕಲಿ ಸುದ್ದಿ ನಂಬಬೇಡಿ ಎಂದು ಹೇಳಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.